ಕೋಡಿಂಬಾಳದ ಕೋರಿಯಾರ್ ಮೂಲಕ ಭ್ರಾಂತಿಕಟ್ಟೆ ಸಂಪರ್ಕಿಸುವ  ರಸ್ತೆಗೆ ಸಚಿವ ಹಾಗೂ ಸಂಸದರಿಂದ ಗುದ್ದಲಿ ಪೂಜೆ

ಕೋಡಿಂಬಾಳದ ಕೋರಿಯಾರ್ ಮೂಲಕ ಭ್ರಾಂತಿಕಟ್ಟೆ ಸಂಪರ್ಕಿಸುವ  ರಸ್ತೆಗೆ ಸಚಿವ ಹಾಗೂ ಸಂಸದರಿಂದ ಗುದ್ದಲಿ ಪೂಜೆ

ಕಡಬ ಟೈಮ್ಸ್, ಕೋಡಿಂಬಾಳ:  ಸುಳ್ಯ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ  ಅಭಿವೃದ್ದಿಗೆ   ಹೆಚ್ಚಿನ ಆದ್ಯತೆ ನೀಡುತ್ತಿದ್ದುಇದೀಗ  ಈ ಭಾಗದ ಜನರ  ಬಹುಕಾಲದ  ಬೇಡಿಕೆ  ಈಡೇರುವ ದಿನ ಹತ್ತಿರ ಬಂದಿದೆ ಎಂದು ಸಚಿವ ಎಸ್. ಅಂಗಾರ ಹೇಳಿದರು.   ಅವರು  ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕೋಡಿಂಬಾಳ – ಕೋರಿಯಾರ್ – ಕೆರ್ಮಾಯಿ – ಪಾದೆಮಜಲು – ಕೊಡೆಂಕೀರಿ – ಭ್ರಾಂತಿಕಟ್ಟೆ ಸಂಪರ್ಕಿಸುವ  8.4 ಕಿ.ಮೀ ರಸ್ತೆಗೆ    8.55 ಲಕ್ಷ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ದಿಗೆ ರಸ್ತೆಗಳು ಪ್ರಮುಖವಾಗಿದ್ದು ಹಂತ ಹಂತವಾಗಿ ಇತರ ರಸ್ತೆಗಳನ್ನು ಉನ್ನತೀಕರಿಸಲಾಗುವುದು. ಯೋಜನೆಗಳು ಬಂದಾಗ ಗ್ರಾಮಸ್ಥರ ಸಹಕಾರವೂ ಅಗತ್ಯವಾಗಿದೆ ಎಂದರು .

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶುದ್ಧ  ಕುಡಿಯುವ ನೀರುವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದದೆ. ಈಪ್ರದೇಶದಲ್ಲೂ ಯೋಜನೆ ಅನುಷ್ಟಾನವಾಗುತ್ತಿದ್ದು  ಪ್ರತಿ ಮನೆಗೂ ಸುದ್ದ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದರಲ್ಲದೆ ಮುಂದಿನ ಹನ್ನೊಂದು ತಿಂಗಳಿನ ಒಳಗೆ  ರಸ್ತೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಇದೇ ವೇಳೆ  ಕೋರಿಯರ್ ನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಸಚಿವ ಮತ್ತು ಸಂಸದರಿಗೆ ಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರು,ಜಿ.ಪಂ ಸದಸ್ಯರು,ಗ್ರಾ. ಸದಸ್ಯರು,ಸ್ಥಳೀಯ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

970×90