ಸುಬ್ರಹ್ಮಣ್ಯ: ಕುಲ್ಕುಂದದಲ್ಲಿ ಕ್ರಿಕೆಟ್ ಪಂದ್ಯಾಟ  ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್  ಪ್ರಥಮ

ಸುಬ್ರಹ್ಮಣ್ಯ: ಕುಲ್ಕುಂದದಲ್ಲಿ ಕ್ರಿಕೆಟ್ ಪಂದ್ಯಾಟ  ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್  ಪ್ರಥಮ

ಕಡಬ ಟೈಮ್ಸ್, ಸುಬ್ರಹ್ಮಣ್ಯ :  ನಂದಿ ವಿಷ್ಣು ಫ್ರೆಂಡ್ಸ್ ಕ್ಲಬ್ ಕುಲ್ಕುಂದ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಎ. 11 ರಂದು ಕುಲ್ಕುಂದದ ಆಶ್ರಯ ಮೈದಾನದಲ್ಲಿ ನಡೆದಿದೆ.

ಪಂದ್ಯಾಟದಲ್ಲಿ ಉಮೇಶ್ ಕೆ.ಎನ್ ಮಾಲಕತ್ವದ ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಥಮ ಸ್ಥಾನ ಪಡೆಯಿತು. ಫ್ರೆಂಡ್ಸ್ ಗಡಿಕಲ್ಲು ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರವೀಂದ್ರಕುಮಾರ್ ರುದ್ರಪಾದ, ದಿನೇಶ್ ಬಿ ಎನ್ , ವಸಂತ ಶರ್ಮಾ, ರತ್ನಾಕರ ಎಸ್, ಗಿರಿಯಪ್ಪ ಕುಲ್ಕುಂದ, ಸತೀಶ್ ಕುಲ್ಕುಂದ, ರಾಜೇಶ್ ಕುಲ್ಕುಂದ, ಬಾಲಕೃಷ್ಣ ಶೆಟ್ಟಿ ಹಾಗೂ ನಂದಿ ವಿಷ್ಣು ಫ್ರೆಂಡ್ಸ್ ಕ್ಲಬ್‌ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

970×90