ಕುಟ್ರುಪಾಡಿ: ಕಳಾರದಲ್ಲಿ ಗ್ರಾ.ಪಂ ರಸ್ತೆ ಅಗೆದ ವಿಚಾರ|ಸ್ಥಳಕ್ಕೆ ಪಿಡಿಒ ಭೇಟಿ| ಹತ್ತು ದಿನದ ಒಳಗೆ ರಸ್ತೆ ಸರಿಪಡಿಸಿ ಕೊಡುವುದಾಗಿ ಒಪ್ಪಿಕೊಂಡ ವ್ಯಕ್ತಿ   

ಕುಟ್ರುಪಾಡಿ: ಕಳಾರದಲ್ಲಿ ಗ್ರಾ.ಪಂ ರಸ್ತೆ ಅಗೆದ ವಿಚಾರ|ಸ್ಥಳಕ್ಕೆ ಪಿಡಿಒ ಭೇಟಿ| ಹತ್ತು ದಿನದ ಒಳಗೆ ರಸ್ತೆ ಸರಿಪಡಿಸಿ ಕೊಡುವುದಾಗಿ ಒಪ್ಪಿಕೊಂಡ ವ್ಯಕ್ತಿ   

ಕಡಬ ಟೈಮ್ಸ್, ಕುಟ್ರುಪಾಡಿ: ಕಡಬ ತಾಲೂಕಿನ ಕುಟ್ರುಪಾಡಿ  ಗ್ರಾ.ಪಂ ವ್ಯಾಪ್ತಿಯ ಕಳಾರದಲ್ಲಿ ಗ್ರಾ.ಪಂ ರಸ್ತೆಯನ್ನು ಅಗೆದ ವ್ಯಕ್ತಿ    ಹತ್ತು ದಿನದ   ಒಳಗೆ  ರಸ್ತೆಯನ್ನು  ಸರಿಪಡಿಸುವುದಾಗಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ  ತಿಳಿಸಿದ್ದಾರೆ.

ಸಾರ್ವಜನಿಕರ  ವಿರೋಧ ವ್ಯಕ್ತವಾದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ    ಏ.೧೫ ರಂದು   ಖುದ್ದು ಸ್ಥಳಕ್ಕೆ   ಕುಟ್ರುಪಾಡಿ ಪಿಡಿಒ  ಜೆರಾಲ್ಡ್ ಮಸ್ಕರೇನಸ್ ಮತ್ತು  ಗ್ರಾ.ಪಂ ಅಧ್ಯಕ್ಷ ಮೋಹನ್ ಕೆರೆಕ್ಕೋಡಿ ಹಾಗೂ ಸದಸ್ಯರು  ಭೇಟಿ ನೀಡಿ ಪರಿಶೀಲಿಸಿದರು.  ರಸ್ತೆ ಅಗೆದ  ಸ್ಥಳದಲ್ಲಿ ಕಲ್ಲು ಹಾಕಿ  ಈ ಹಿಂದಿನ ರಸ್ತೆಯಂತೆ ಮಾಡಬೇಕೆಂಬ ಗ್ರಾಮಸ್ಥರ  ಬೇಡಿಕೆಯಂತೆ   ರಸ್ತೆಯನ್ನು ಅಗೆದ ವ್ಯಕ್ತಿ ಸರಿಪಡಿಸುವುದಾಗಿ ಅಧಿಕಾರಿಗಳಿಗೆ ಲಿಖಿತ ಹೇಳಿಕೆ ನೀಡಿದರು.

ಘಟನೆಯ ವಿವರ: ಕಳಾರದಲ್ಲಿ  ಮುಖ್ಯ ರಸ್ತೆಯ  ಸಮೀಪ   ದೇರಾಜೆಯ ಶಶಿ ಎಂಬವರು  ಸೈಟೊಂದನ್ನು  ಖರೀದಿಸಿದ್ದು  ಏ.13ರಂದು  ಮುಖ್ಯ ರಸ್ತೆಗೆ ಸಮಾನವಾಗಿ  ಜೆಸಿಬಿ ಮೂಲಕ  ರಸ್ತೆ ಮಾಡಲು ಮುಂದಾಗಿದ್ದರು.ಇದನ್ನು ಕಳಾರ-ಮುಳಿಯ-ಇಂದ್ರಾಡಿ ರಸ್ತೆಯಲ್ಲಿ ಸಂಚರಿಸುವವರು ಪ್ರಶ್ನಿಸಿ ರಶ್ಟೇ ಅಗೆಯುವುದಕ್ಕೆ ತಡೆಯೊಡ್ದಿದ್ದರು. ಸ್ಥಳೀಯ ದೂರಿನ ಅನ್ವಯ  ಎಸ್.ಐ ರುಕ್ಮ ನಾಯ್ಕ್   ಸ್ಥಳಕ್ಕೆ ಭೇಟಿ ನೀಡಿ  ಕೆಲಸ ಸ್ಥಗಿತಗೊಳಿಸುವಂತೆ  ಎಚ್ಚರಿಕೆ ನೀಡಿದ್ದರು .  ರಸ್ತೆಯನ್ನು ಸರಿಪಡಿಸದಿದ್ದಲ್ಲಿ   ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ಮತ್ತು ಧರಣಿ  ಮಾಡುವುದಾಗಿ ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದರು .

970×90