ಬ್ರೇಕ್ ಜಾಮ್ ಆಗಿ ಚರಂಡಿಗೆ ಬಿದ್ದ ಸುಣ್ಣದ ಚೀಲ ತುಂಬಿದ ವಾಹನ!

ಬ್ರೇಕ್ ಜಾಮ್ ಆಗಿ ಚರಂಡಿಗೆ ಬಿದ್ದ ಸುಣ್ಣದ ಚೀಲ ತುಂಬಿದ ವಾಹನ!

ಕಡಬ ಟೈಮ್ಸ್, ಸುಳ್ಯ:   ವಾಹನವೊಂದು  ಬ್ರೇಕ್ ಜಾಮ್  ಆಗಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ  ಸುಳ್ಯ ತಾಲೂಕಿನ  ಗೂನಡ್ಕ ಬಳಿ ಸಂಭವಿಸಿದೆ.

ಅರಂತೋಡು ಭಾಗದಿಂದ ಕಲ್ಲು ಗುಂಡಿಗೆ ಸುಣ್ಣದ ಚೀಲವನ್ನು ತುಂಬಿಸಿ ಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ  ಗೂನಡ್ಕ ತಿರುವು ಬಳಿ ಬುಧವಾರ ಸಂಜೆ ಹೋಗುತ್ತಿದ್ದಾಗ ಬ್ರೇಕ್ ಜಾಮ್ ಆಗಿ ರಸ್ತೆಬದಿಯ ಚರಂಡಿಗೆ ಬಿದ್ದಿದೆ.

ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಜ್ಮೇರಿಯ ಸೆರೆಮಿಕಲ್  ಸಂಸ್ಥೆಗೆ ಸಂಬಂಧಪಟ್ಟ  ವಾಹನ ಇದಾಗಿದ್ದು, ಪಿಕಪ್ ವಾಹನವನ್ನು ಬಳಸಿ ವಾಹನವನ್ನು ಚರಂಡಿಯಿಂದ ಮೇಲೆ ಎತ್ತಲಾಗಿದೆ .

970×90