ಕೋಡಿಂಬಾಳ:ಒಂದೇ ಕುಟುಂಬದ ಮೂವರಿಗೆ ಡೆಂಗ್ಯೂ ಜ್ವರ

ಕೋಡಿಂಬಾಳ:ಒಂದೇ ಕುಟುಂಬದ ಮೂವರಿಗೆ ಡೆಂಗ್ಯೂ ಜ್ವರ

ಕಡಬ ಟೈಮ್ಸ್, ಕೋಡಿಂಬಾಳ:  ಕಳೆದ ವರ್ಷ ಕೋಡಿಂಬಾಳ  ಭಾಗದಲ್ಲಿ ವ್ಯಾಪಕ  ಡೆಂಗ್ಯೂ  ಜ್ವರ  ಕಾಣಿಸಿಕೊಂಡ ಪ್ರದೇಶದಲ್ಲಿ ಈ ಬಾರಿಯೂ ಡೆಂಗ್ಯೂ ಜ್ವರ ಸುದ್ದಿ ಮಾಡಿದೆ.

ಕೋಡಿಂಬಾಳ ಗ್ರಾಮದ ಮುಳಿಯ ಒಂದೇ ಕುಟುಂಬದ ಮೂವರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು,  ನ ಲೋಹಿತ್, ತೇಜಶ್ವಿನಿ ಹಾಗೂ ಶೃತಿ ಎಂಬವರು ಪುತ್ತೂರು ಮಹಾವೀರ ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ ಪ್ರತಿಕ್ರಿಯೆ ನೀಡಿ  ಡೆಂಗ್ಯೂ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು ಆ ಭಾಗದಲ್ಲಿ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆವೆ ಎಂದು ಹೇಳಿದ್ದಾರೆ.

970×90