ಸುಬ್ರಹ್ಮಣ್ಯ:ಜೇಸಿಐ ಬೆಳ್ಳಿಹಬ್ಬ ಆಚರಣೆ ಹಿನ್ನೆಲೆ| ಜನಸ್ನೇಹಿ ಟ್ರಸ್ಟ್ ಗೆ ವಾಹನ ಕೊಡುಗೆ

ಸುಬ್ರಹ್ಮಣ್ಯ:ಜೇಸಿಐ ಬೆಳ್ಳಿಹಬ್ಬ ಆಚರಣೆ ಹಿನ್ನೆಲೆ| ಜನಸ್ನೇಹಿ ಟ್ರಸ್ಟ್ ಗೆ ವಾಹನ ಕೊಡುಗೆ

ಕಡಬ ಟೈಮ್ಸ್, ಸುಬ್ರಹ್ಮಣ್ಯ :  ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಇದರ ಬೆಳ್ಳಿಹಬ್ಬ ಆಚರಣೆ ಅಂಗವಾಗಿ  ಬೆಂಗಳೂರಿನ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್‌ಗೆ ಟಾಟಾ ಸುಮಾ ವಾಹನವನ್ನು  ಕೊಡುಗೆಯಾಗಿ ನೀಡಲಾಯಿತು.

ಅನಾಥರಿಗೆ, ವೃದ್ಧರಿಗೆ ಆಸರೆ ನೀಡುತ್ತಿರುವ ಈ ಸಂಸ್ಥೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಾಹನವನ್ನು ಹಸ್ತಾಂತರಿಸಿದರು. ಸುಬ್ರಹ್ಮಣ್ಯ ಜೇಸೀಸ್ ನ ನಿಕಟಪೂರ್ವಾಧ್ಯಕ್ಷ ಹೆಚ್.ಜಿ.ಎಫ್. ಮಣಿಕಂಠ ವಾಹನವನ್ನು ದಾನವಾಗಿ ನೀಡಿದರು.

ಬೆಂಗಳೂರು ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಜನಸ್ನೇಹಿ ಯೋಗೀಶ್, ಜೇಸಿಯ  ರಾಷ್ಟ್ರೀಯ ಸಂಯೋಜಕ ಜೆ.ಎಫ್.ಎಸ್. ರವಿಕಕ್ಕೆಪದವು, ಪೂರ್ವ ರಾಷ್ಟ್ರೀಯ ನಿರ್ದೇಶಕ ಜೇಸಿ ಪಿ.ಪಿ.ಪಿ. ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಜೇಸೀಸ್ ನ ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್,  ಮಾಸ್ಟರ್ ಪ್ಲಾನ್ ಮಾಜಿ ಸದಸ್ಯ ಲೋಲಾಕ್ಷ ಕೈಕಂಬ, ಮಾಜಿ ಗ್ರಾ.ಪಂ. ಸದಸ್ಯ ಕಿಶೋರ್ ಅರಂಪಾಡಿ, ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ವೆಂಕಟೇಶ್ ಹೆಚ್.ಎಲ್, ಗೋಪಾಲ ಎಣ್ಣೆಮಜಲು, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಅಧ್ಯಕ್ಷ ದೀಪಕ್ ನಂಬಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

970×90