ಕಡಬ: ಹುತಾತ್ಮ ವೀರ ಯೋಧರಿಗೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ

ಕಡಬ: ಹುತಾತ್ಮ ವೀರ ಯೋಧರಿಗೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ :  ಕಡಬ ಹಿಂದು ಜಾಗರಣ ವೇದಿಕೆಯಿಂದ ಹುತಾತ್ಮ ವೀರ ಯೋಧರಿಗೆ  ಎ.8ರಂದು ಕಡಬದ ಶ್ರೀ ದುರ್ಗಂಬಿಕಾ ಅಮ್ಮನವರ ದೇವಸ್ಥಾನದ ಸಭಾ ಭವನದಲ್ಲಿ   ಶ್ರದ್ದಾಂಜಲಿ ಸಭೆ ನಡೆಯಿತು

ಎ.3.ರಂದು ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಗಳು ನಡೆಸಿದ ದಾಳಿಯಲ್ಲಿ ಹುತಾತ್ಮರಾದ 22 ಸಿ ಆರ್ ಪಿ ಎಫ್ ಭದ್ರತಾ ಪಡೆಯ ವೀರ ಯೋಧರಿಗೆ  ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಾಕ ಸಂಘದ ಕಾರ್ಯಕರ್ತ ಪ್ರವೀಣ್ ಆಳ್ವಾ, ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ಪ್ರದಾನ ಕಾರ್ಯದರ್ಶಿ ರವೀಂದ್ರ ದಾಸ್ ಪೂಂಜ,  ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಪ್ರಮುಕ್ ಮೋಹನ್ ಕೊಯಿಲ ಸೇರಿದಂತೆ  ಕಡಬ ತಾಲೂಕು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ದೇಶಭಕ್ತ ನಾಗರೀಕ ಬಂದುಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

970×90