ಕಡಬ:ದೊಡ್ಡಕೊಪ್ಪದಲ್ಲಿ ಕುಲಾಲ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂ ಮಂಜೂರು-ಸಚಿವ ಎಸ್.ಅಂಗಾರ

ಕಡಬ:ದೊಡ್ಡಕೊಪ್ಪದಲ್ಲಿ ಕುಲಾಲ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂ ಮಂಜೂರು-ಸಚಿವ ಎಸ್.ಅಂಗಾರ

ಕಡಬ ಟೈಮ್ಸ್,ಪಟ್ಟಣ ಸುದ್ದಿ:   ದೊಡ್ಡಕೊಪ್ಪದಲ್ಲಿ ಕುಲಾಲ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ರೂ ಮಂಜೂರು ಮಾಡಲಾಗಿದೆ,  ಉಳಿದಂತೆ ಇನ್ನೂ ಹತ್ತು ಲಕ್ಷ ರೂ ಒದಗಿಸಲಾಗುವುದು ಎಂದು ಸಚಿವ ಎಸ್. ಅಂಗಾರ ಹೇಳಿದರು.

ಅವರು ಏ.೭ರಂದು  ದೊಡ್ಡ ಕೊಪ್ಪ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಬಳಿ ದೊಡ್ಡಕೊಪ್ಪ -ಪಣೆಮಜಲು-ಹೊಸಮಠ  ಸಂಪರ್ಕಿಸುವ ಏಳು ಕಿಲೋ ಮೀಟರ್ ರಸ್ತೆಯ  ಅಭಿವೃದ್ಧಿ ಹಾಗೂ ಮರುಡಾಮರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಸಂದರ್ಭ ಈ ವಿಚಾರ ತಿಳಿಸಿದರು.

ಇಲ್ಲಿ ಆವೆ ಕೊಟ್ಟಿಗೆ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ, ಹಾಗೂ ಇಲ್ಲಿರುವ ದೈವಸ್ಥಾನದ  ನರ್ತನಾ ಜಾಗದಲ್ಲಿ ಶಾಶ್ವತ ಚಪ್ಪರ ವ್ಯವಸ್ಥೆಗೆ ಕೂಡಾ ಅನುದಾನ ನೀಡಲಾಗುವುದು, ಇದೀಗ  ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ದೊಡ್ಡಕೊಪ್ಪದಿಂದ ಹೊಸಮಠಕ್ಕೆ ಸಂಪರ್ಕ ಕಲ್ಪಿಸುವ ಸುಮಾರು  ಏಳು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೊಡ್ಡಕೊಪ್ಪ ಜನತೆಯ ಆಶಯದಂತೆ ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಚಿವರು ಹೇಳಿದರು

970×90