ನಮ್ಮ ಕಡಬಕ್ಕೆ ಹೆಮ್ಮೆ | ಗಡಿಭದ್ರತಾ ಪಡೆಗೆ  ಕಾಣಿಯೂರಿನ ಯುವತಿ ನೇಮಕ

ನಮ್ಮ ಕಡಬಕ್ಕೆ ಹೆಮ್ಮೆ | ಗಡಿಭದ್ರತಾ ಪಡೆಗೆ  ಕಾಣಿಯೂರಿನ ಯುವತಿ ನೇಮಕ

ಕಡಬ ಟೈಮ್ಸ್, ಕಾಣಿಯೂರು:  ಕಾಣಿಯೂರು ಗ್ರಾಮದ ಯುವತಿಯೊಬ್ಬಳು ಭಾರತೀಯ ಸೇನೆಯ ಗಡಿಭದ್ರತಾ ಪಡೆ(BSF) ಗೆ ಆಯ್ಕೆಯಾಗಿದ್ದಾರೆ.

ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿಯವರ ಸುಪುತ್ರಿ ಯೋಗಿತಾ ಎಂ. ರವರು   ಭಾರತೀಯ ಸೇನೆಯ ಗಡಿಭದ್ರತಾ ಪಡೆ(BSF) ಗೆ ಆಯ್ಕೆಯಾದವರು. ಇಅವರು   ಎಪ್ರಿಲ್ 1 ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪಡೆದಿದ್ದು,   ಪ್ರೌಢಶಿಕ್ಷಣವನ್ನು  ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ ಪೂರೈಸಿದ್ದಾರೆ.ಬಳಿಕ   ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್ ಇಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ  ಪಿಯು ಶಿಕ್ಷಣ ಪಡೆದಿರುತ್ತಾರೆ.  ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಬಿಎಸ್ಸಿ ಪದವಿ, ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ  ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿರುತ್ತಾರೆ.

ಮೊತ್ತಮೊದಲ ಬಾರಿಗೆ ಕಾಣಿಯೂರಿನ ಯುವತಿ ಮಿಲಿಟರಿಗೆ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ  ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

970×90