ಗ್ರಾಮ ಮಟ್ಟದಲ್ಲಿ ಯುವಕರ ಸಮಿತಿ ರಚಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ-ಸಲೀಂ ಅಹ್ಮದ್

ಗ್ರಾಮ ಮಟ್ಟದಲ್ಲಿ ಯುವಕರ ಸಮಿತಿ ರಚಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ-ಸಲೀಂ ಅಹ್ಮದ್

ಕಡಬ ಟೈಮ್ಸ್, ಸುಳ್ಯ :   ಗ್ರಾಮ ಮಟ್ಟದಲ್ಲಿ ಯುವಕರ ಸಮಿತಿಯನ್ನು ರಚಿಸಿ  ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲಾಗುವುದು ಎಂದು ಕೆp.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಹೇಳಿದರು.

ಮಾ. 26 ಅರಂತೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ  ಅವರು ಗ್ರಾಮ ಮಟ್ಟದ ದಲ್ಲಿ  ಆಡಳಿತ ರೂಡ ಪಕ್ಷದ   ಬಗ್ಗೆ ಚರ್ಚಿಸಿ ,ಕಾಂಗ್ರೆಸ್ ಪಕ್ಷದ ಸಂಘಟನೆಯ ಬಗ್ಗೆ  ಸೂಕ್ತ ಯೋಜನೆ ರೂಪಿಸಿ , ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ೨೦೨೩ ನೇ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರ ಕ್ಕೆ ತರುವುದಾಗಿ ಭರವಸೆ ನೀಡಿದರು

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪಿ. ಸಿ. ಜಯರಾಮ್, ಮಾಜಿ ಅದ್ಯಕ್ಷ,  ಹಾಲಿ ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡ, ಟಿ.ಯಂ. ಶಾಹಿದ್, ಕಾಂಗ್ರೆಸ್ ಉಸ್ತುವಾರಿ ಕೃಷ್ಣಪ್ಪ, ಸಂಪಾಜೆ ಗ್ರಾ ಪಂ ಅದ್ಯಕ್ಷ ಜಿ. ಕೆ. ಹಮೀದ್, ನಗರ ಪಂಚಾಯತ್ ಮಾಜಿ ಅದ್ಯಕ್ಷ ಕೆ. ಎಂ.ಮುಸ್ತಾಫ ಹಾಜರಿದ್ದರು.

970×90