ಮರ್ದಾಳ ಗ್ರಾ.ಪಂ ಸಾಮಾನ್ಯ ಸಭೆ: ಬಹುಗ್ರಾಮ ಕಸ ವಿಲೇವಾರಿ ಘಟಕ ಬೇಡ -ಸದಸ್ಯರ ಏಕಾಭಿಪ್ರಾಯ

ಮರ್ದಾಳ ಗ್ರಾ.ಪಂ ಸಾಮಾನ್ಯ ಸಭೆ: ಬಹುಗ್ರಾಮ ಕಸ ವಿಲೇವಾರಿ ಘಟಕ ಬೇಡ  -ಸದಸ್ಯರ  ಏಕಾಭಿಪ್ರಾಯ

ಕಡಬ  ಟೈಮ್ಸ್,ಮರ್ದಾಳ : ಕಡಬ ತಾಲೂಕಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರಿ ಕಛೇರಿಗಳು ಮರ್ದಾಳ ಭಾಗಕ್ಕೆ ಬರುತ್ತಿದೆ,  ಅಲ್ಲದೆ ಬಹುಗ್ರಾಮ ಘನ ತ್ಯಾಜ್ಯ ಘಟಕ ಈಗಾಗಲೇ ನಿರ್ಮಾಣ ಗೊಂಡಿದ್ದು ಈ ಘಟಕದಲ್ಲಿ ಬಹುಗ್ರಾಮ ಕಸ ವಿಲೇವಾರಿ ಘಟಕ ಬೇಡ ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಪಂಚಾಯತ್ ಅಧ್ಯಕ್ಷ ಹರೀಶ್ ಕೊಡಂದೂರು ಅವರ ಅಧ್ಯಕ್ಷತೆಯಲ್ಲಿ ಮಾ.೨೪ ರಂದು  ನಡೆಯಿತು. ಪಿಡಿಒ ಆನಂದ.ಎ, ಕಾರ್ಯದರ್ಶಿ ವೆಂಕಟರಮಣ, ಉಪಾಧ್ಯಕ್ಷೆ ಸರೋಜಿನಿ ಸದಸ್ಯರಾದ ಗಂಗಾಧರ ರೈ,ಅಜಯ್,ಮಹಮ್ಮದ್ ಶಕೀರ್, ಪ್ರೇಮ, ಸ್ಮೀತಾ ಕೆ.ವಿ, ಮೀನಾಕ್ಷಿ, ಯಮುನಾ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಗಣೇಶ್ ಕೈಕುರೆ ಹಾಗೂ ಹಲವಾರು ಗ್ರಾಮಸ್ಥರು ಬಹುಗ್ರಾಮ ಘನ ತ್ಯಾಜ್ಯ ಘಟಕ ನಿರ್ಮಾಣ ಕ್ಕೆ ವಿರೋಧ ವ್ಯಕ್ತಪಡಿಸಿ ಸಭೆಯಲ್ಲಿ ಅಧ್ಯಕ್ಷರಿಗೆ ಮನವಿ ಪತ್ರ ನೀಡಿದರು.

970×90