ಕಡಬ:ಬೃಹತ್ ನೀರಿನ ಟ್ಯಾಂಕ್ ನ ಕಂಬಗಳಲ್ಲಿ ಬಿರುಕು | ಯಾವುದೇ ಮುನ್ಸೂಚನೆ ಇಲ್ಲದೆ ಕುಸಿಯಬಹುದು

ಕಡಬ:ಬೃಹತ್ ನೀರಿನ ಟ್ಯಾಂಕ್ ನ ಕಂಬಗಳಲ್ಲಿ ಬಿರುಕು | ಯಾವುದೇ ಮುನ್ಸೂಚನೆ ಇಲ್ಲದೆ ಕುಸಿಯಬಹುದು

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ಪೇಟೆಯುದ್ದಕ್ಕೂ ನೀರು ಸರಬರಾಜು ಮಾಡುತ್ತಿರುವ ಬೃಹತ್ ನೀರಿನ ಟ್ಯಾಂಕ್ ನ ಕಂಬಗಳು ಬಿರುಕುಬಿಟ್ಟಿದ್ದು ಕುಸಿಯುವ ಭೀತಿ ಎದುರಾಗಿದೆ.

ಆಕಸ್ಮಿಕವಾಗಿ ನೀರಿನ ಟ್ಯಾಂಕ್  ಕುಸಿದು ಬಿದ್ದರೆ ಗ್ರಾಮ ಕರಣಿಕರ ಕಚೇರಿ, ಪಟ್ಟಣ ಪಂಚಾಯಿತಿ  ಸೇರಿದಂತೆ  ಪ್ರಮುಖ ವಾಣಿಜ್ಯ ಕಟ್ಟಡಗಳಿಗೂ ಹಾನಿಯಾಗುವ ಸಂಭವ ಹೆಚ್ಚಿದೆ. ಅಲ್ಲದೆ ಪ್ರಾಣ ಹಾನಿಯೂ ಆಗುವ ಭೀತಿಯೂ ಇದೆ. ಟ್ಯಾಂಕ್​ನ ಕಂಬಗಳು ಬಿರುಕು ಬಿಟ್ಟಿದ್ದರೂ ಅಧಿಕಾರಿಗಳು ಈ ಬಗ್ಗೆ  ಕ್ರಮ ಕೈಗೊಳ್ಳುತ್ತಿಲ್ಲ  ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಟ್ಯಾಂಕ್​ನ ಅರ್ಧದಷ್ಟು ಭಾಗ ಕೆಸರು, ಗಲೀಜು ತುಂಬಿಕೊಂಡಿದೆ ,ಅಲ್ಲದೆ ಸರಿಯಾಗಿ ನಿರ್ವಹಣೆಯೂ ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಈ ಬೃಹತ್ ನೀರಿನ ಟ್ಯಾಂಕ್ 1977-78ನೇ ಇಸವಿಯಲ್ಲಿ ಅಂದಿನ ಗ್ರಾ.ಪಂ ಅಧ್ಯಕ್ಷರಾಗಿದ್ದ  ಸಯ್ಯದ್ ಮೀರಾ ಸಾಹೇಬ್ ಅವರ ಅವಧಿಯಲ್ಲಿ ನಿರ್ಮಾಣಗೊಂಡಿತ್ತು. ಅಂದಿನ  ಇಂಜಿನಿಯರ್ ಸಿ.ಎಂ.ಪಾಲಾಕ್ಷ ರವರ ಮೇಲುಸ್ತುವಾರಿಯಲ್ಲಿ 1979ರಲ್ಲಿ ಉದ್ಘಾಟನೆಗೊಂಡಿತ್ತು.

970×90