ಕಡಬ: ಉರಿಬಿಸಿಲಿನ ಧಗೆ | ತಂಪು ಪಾನೀಯದ ಮೊರೆ ಹೋಗುತ್ತಿರುವ ಜನರು

ಕಡಬ: ಉರಿಬಿಸಿಲಿನ ಧಗೆ | ತಂಪು ಪಾನೀಯದ ಮೊರೆ ಹೋಗುತ್ತಿರುವ ಜನರು

ಕಡಬ ಟೈಮ್ಸ್, ವಿಶೇಷ ಸುದ್ದಿ: ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.  ಮಧ್ಯಾಹ್ನದ ಬಳಿಕವಂತೂ ಹೊರಗಡೆ   ಬರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಬಿಸಿಲಿನ  ತಾಪಕ್ಕೆ   ಕಣ್ಣು ಮಂಜು, ತಲೆ ಸುತ್ತು ಆದಂತೆ ಭಾಸವಾಗುತ್ತಿದ್ದು  ಜನರು ವಿವಿಧ  ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.  ಸೀಯಾಳಕ್ಕೆ ಹೆಚ್ಚಿನ ಬೇಡಿಕೆ ಇದ್ದು ಇದರ ಜೊತೆಗೆ ಕಬ್ಬು ಜ್ಯೂಸ್,ಎಳ್ಳು,ಸೋಡಾ ಶರ್ಬತ್, ಪುನರ್ಪುಳಿ , ಮಜ್ಜಿಗೆಯನ್ನು ಜನ ಇಷ್ಟ ಪಡುತ್ತಿದ್ದಾರೆ.  ಸದ್ಯ  ಸೀಯಾಳವು 35ರಿಂದ 40 ರೂ.ಗಳವರೆಗೆ ಮಾರಾಟವಾಗುತ್ತಿದೆ. ಇದಲ್ಲದೆ   ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆಯನ್ನು ಹೆಚ್ಚಾಗಿ ಖರೀದಿಸಿ ಮನೆಗೆ ಕೊಂದೊಯ್ಯುತ್ತಿದ್ದಾರೆ.

ಕಳೆದ ಒಂದು ವಾರದಿಂದ ಕಡಬ ತಾಲೂಕಿನಲ್ಲಿ ಮೋಡ ಕವಿದ  ವಾತಾವರಣದ ಜೊತೆಗೆ   ತಾಪಮಾನ ಗರಿಷ್ಠ 35, 36, 38 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು.  ಈ ವಾರ ತಾಪಮಾನ  ಇನ್ನಷ್ಟು  ಏರಿಕೆಯಾಗಬಹುದು  ಎಂದು ಹಿರಿಯಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿರುವ ಉದಾಹರಣೆಯಿದೆ.

ವ್ಯಾಪಾರಸ್ಥರು ರಸ್ತೆ ಬದಿ ಹಾಗೂ ಮರದ ಬುಡಗಳಲ್ಲಿ ತಾತ್ಕಾಲಿಕ ಪಾನೀಯದ  ಜ್ಯೂಸ್ ಸೆಂಟರ್‌ಗಳನ್ನು ತೆರೆದು ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಪಾನೀಯಗಳಿಗಿಂತಲೂ ಆರೋಗ್ಯದ ದೃಷ್ಟಿಯಿಂದ ಜನರು ಕಾಳಜಿ ವಹಿಸಿ ಎಳನೀರನ್ನು ಹೆಚ್ಚು ಕುಡಿಯುತ್ತಿದ್ದಾರೆ.

970×90