ತನ್ನ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಸಾವು!

ತನ್ನ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಸಾವು!

ಬೆಳ್ತಂಗಡಿ: ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿ ಉದ್ಘಾಟನೆಗೆಂದು ತೆರಳುತ್ತಿದ್ದ ಎಂಜಿನಿಯರ್ ಯುವಕನೋರ್ವ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ನಡೆದ ಅಪಘಾತದಲ್ಲಿ ಮೃಪಟ್ಟ ಘಟನೆ ಸೋಮವಾರ ನಡೆದಿದೆ.

ಬಂಟ್ವಾಳ ತಾಲೂಕು ಮದ್ದ ನಿವಾಸಿ ಮಾಝಿನ್ (28) ಮೃತಪಟ್ಟ ಯುವಕ.

ಇದನ್ನೂ ಓದಿ:ಜಾತ್ರೆಯಿಂದ ಬರುತ್ತಿದ್ದವನಿಗೆ ಎದುರಾಯಿತು ಮೃತ್ಯು: ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಮಾಲಾಡಿ ಸಮೀಪ ಅರ್ತಿಲ ತಿರುವಿನಲ್ಲಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಲಾಗಿದೆ.

ಯುವಕನನ್ನು ತಕ್ಷಣ ಸ್ಥಳೀಯರು ಬೆಳ್ತಂಗಡಿ ಸರಕಾರಿ‌ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ತಲಪಾಡಿಯಲ್ಲಿ ಬಸ್- ಸ್ಕೂಟರ್ ಅಪಘಾತ: ಗಂಭೀರ ಗಾಯಗೊಂಡ ಸವಾರ

ಎಂಜಿನಿಯರ್ ಆಗಿರುವ ಮಾಝಿನ್ ಮದ್ದಡ್ಕದಲ್ಲಿ ಕಚೇರಿ ತೆರೆದಿದ್ದರು. ಹಿಗಾಗಿ ಸೋಮವಾರ ಕಚೇರಿ‌ ಉದ್ಘಾಟನೆ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

970×90