ಸವಣೂರು: ಜಾತ್ರೆಗೆ ತೆರಳಿ ಹಿಂತಿರುಗುವಾಗ ಬೈಕ್ ಅಪಘಾತ | ಸವಾರ ಸಾವು,ಮತ್ತೋರ್ವ ಗಂಭೀರ

ಸವಣೂರು: ಜಾತ್ರೆಗೆ ತೆರಳಿ ಹಿಂತಿರುಗುವಾಗ ಬೈಕ್ ಅಪಘಾತ | ಸವಾರ ಸಾವು,ಮತ್ತೋರ್ವ ಗಂಭೀರ

ಕಡಬ ಟೈಮ್ಸ್, ಸವಣೂರು: ಪುತ್ತೂರು- ಸವಣೂರು ರಸ್ತೆಯ ಮಾಂತೂರು ಎಂಬಲ್ಲಿ ಬೈಕ್ ಅಪಘಾತಗೊಂಡು ವಿವೇಕಾನಂದ ಕಾಲೇಜು ವಿದ್ಯಾರ್ಥಿಯೊಬ್ಬರು  ಮೃತಪಟ್ಟ ಘಟನೆ ಮಾ.21 ರ ತಡ ರಾತ್ರಿ ನಡೆದಿದೆ.

ಬೈಕ್ ನಲ್ಲಿದ್ದ ಸಹ ಸವಾರ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ. ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ಚೇತನ್ ಮೃತಪಟ್ಟವರು. ಅವರ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಚೇತನ್ ರವರು ಪುತ್ತೂರು ಪಿಜಿಯಲ್ಲಿದ್ದು, ಮಾ.21 ರಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ರವರ ಜೊತೆ ಹೋಗಿದ್ದವರು. ಬಳಿಕ ರಾತ್ರಿ ಸ್ನೇಹಿತ ಸುದೀಪ್  ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಸವಣೂರಿನ ಮಾಂತೂರು ಸಮೀಪ ಬೈಕ್ ಅಪಘಾತಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ನಡುವೇ ಚೇತನ್ ಮೃತಪಟ್ಟಿದ್ದರು.  ಗಂಭೀರ ಗಾಯಗೊಂಡ ಸುದೀಪ್ ರವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ರಾತ್ರಿ ಕರೆದೊಯ್ಯಲಾಗಿದೆ.

970×90