ಕೊಳ್ತಿಗೆ: ಸೌಹಾರ್ದ ಸಮಿತಿ ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ-2021 ಕ್ರಿಕೆಟ್ ಪಂದ್ಯಾಟ

ಕೊಳ್ತಿಗೆ: ಸೌಹಾರ್ದ ಸಮಿತಿ ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ-2021 ಕ್ರಿಕೆಟ್ ಪಂದ್ಯಾಟ

ಪುತ್ತೂರು: ಸೌಹಾರ್ದ ಸಮಿತಿ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ-2021, ಸೀಸನ್-1 ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸ್ಟ್ರಯಟ್ ಸಿಕ್ಸ್ ಹಾಗೂ 30 ಗಜಗಳ ಲೀಗ್ ಪಂದ್ಯಾಟವು ಮಾ. 20ನೇ ಶನಿವಾರದಂದು ರಾತ್ರಿ ಗಂಟೆ 8: 00 ರಿಂದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲಾ ಮೈದಾನ ಪೆರ್ಲಂಪಾಡಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಕ್ರೀಡೆಯಲ್ಲಿ ಯಾವತ್ತೂ ಯಾವುದೇ ಒಂದು ಜಾತಿ ಭೇದ, ಮತಭೇದ, ಅಂತಸ್ತು ಭೇದ ಕಾಣುವುದಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾ ಮನೋಭಾವದಿಂದ ಹೋದಾಗ ಮಾತ್ರ ಸೌಹಾರ್ದತೆಯನ್ನು ಕಾಣಬಹುದು ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಮಕೃಷ್ಣ ಹೆಣ್ಮಕ್ಕಳ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಜಾತಿ, ಧರ್ಮಗಳ ಗೊಂದಲದ ಸಂದರ್ಭದಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇವತ್ತು ಸೌಹಾರ್ದತೆಗೆ ಹೆಚ್ಚು ಒತ್ತನ್ನು ಕೊಡುವ ಕಾರ್ಯಕ್ರಮ ಎಲ್ಲಿದೆ, ಯಾರು ಮಾಡುತ್ತಾರೋ ಅವರಿಗೆ ಇವತ್ತು ಸಮಾಜದಲ್ಲಿ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ಪ್ರದೀಪ್ ಕುಮಾರ್ ರೈ ಪಾಂಬಾರು ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಇಂತಹ ಸಮಾಜದಲ್ಲಿ ಹಲವು ಕೆಲಸ ಕಾರ್ಯಗಳ ಮೂಲಕ ಸೌಹಾರ್ದತೆಯೊಂದಿಗೆ ಗುರುತಿಸಲ್ಪಡುವ ಚಿಂತನೆಯಿರುವ ಯುವಕ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಬಂಟ್ವಾಳ ಪೋಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಟಿ ಡಿ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪ್ರೋ ಕಬಡ್ಡಿ ಆಟಗಾರರಾದ ಶ್ರೀ ಪ್ರಶಾಂತ್ ರೈ ಕೈಕಾರ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌಹಾರ್ದ ಸಮಿತಿ ದ.ಕ. ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ರೈ ಪಾಂಬಾರು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್ ಚಂದ್ರಹಾಸ ಶೆಟ್ಟಿ, ಸಿ.ಎ ಬ್ಯಾಂಕ್ ಪೆರ್ಲಂಪಾಡಿ ಇದರ ಅಧ್ಯಕ್ಷರಾದ ಶ್ರೀ ಕೆ ವಸಂತ ಕುಮಾರ್ ರೈ ದುಗ್ಗಳ, ಅರಣ್ಯ ಸಮಿತಿ ಕೊಳ್ತಿಗೆ ಇದರ ಅಧ್ಯಕ್ಷರಾದ ಶ್ರೀ ಪ್ರಮೋದ್ ಕೆ ಎಸ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

970×90