ಕಡಬ : FIR ದಾಖಲಿಸಿ ನ್ಯಾಯಕೊಡಿ  ರಕ್ತದಲ್ಲಿ ಬರೆದು ಎಚ್ಚರಿಕೆ |ಸ್ಥಳಕ್ಕೆ ಬಾರದ ಮಾನವೀಯತೆ ಇಲ್ಲದ ಅಧಿಕಾರಿಗಳು  

ಕಡಬ : FIR ದಾಖಲಿಸಿ ನ್ಯಾಯಕೊಡಿ  ರಕ್ತದಲ್ಲಿ ಬರೆದು ಎಚ್ಚರಿಕೆ |ಸ್ಥಳಕ್ಕೆ ಬಾರದ ಮಾನವೀಯತೆ ಇಲ್ಲದ ಅಧಿಕಾರಿಗಳು  

ಕಡಬ ಟೈಮ್ಸ್, ಪಟ್ಟಣ ಸುದ್ದಿ : ಅರಣ್ಯಾಧಿಕಾರಿಗಳ ದೌರ್ಜನ್ಯ ದ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ  ಆಗ್ರಹಿಸಿ  ನಡೆಯುತ್ತಿರುವ  ಉಪವಾಸ ಸತ್ಯಾಗ್ರಹ  ಐದನೇ  ದಿನ  ಮುಂದುವರೆದಿದೆ.

ರಕ್ತ ಚಳುವಳಿ ಹೆಸರಿನಲ್ಲಿ   ಮೊದಲು  ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಅವರು ಬ್ಲೇಡ್ ಮೂಲಕ ಬೆರಳಿನ  ತುದಿ ಕಟ್ ಮಾಡಿ ಆ ರಕ್ತದಲ್ಲಿ FIR ದಾಖಲಿಸಿ ನ್ಯಾಯಕೊಡಿ ,ಅಧಿಕಾರಿಯವರೆ ನಮ್ಮನ್ನು ಬಲಿಕೊಡದಿರಿ” ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿರಿ:  ಕಡಬ :ಐದನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ  |ಶಾಂತಿಯುತ ಪ್ರತಿಭಟನೆ ರಕ್ತ ಚಳುವಳಿಯಾಗಿ ಮಾರ್ಪಾಡು 

ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಇಲ್ಲವೇ ಕೇಸು ದಾಖಲಿಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ ಎಂದು   ಅಧಿಕಾರಿಗಳ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ.  ಈ ಬಗ್ಗೆ ಸ್ಪಷ್ಟ ನಿಲುವನ್ನು ಜಿಲ್ಲಾಡಳಿತ  ನೀಡದ ಹಿನ್ನೆಲೆಯಲ್ಲಿ  ಈ  ಧರಣಿ ಮುಂದುವರೆದಿದೆ.ಉನ್ನತ ಅರಣ್ಯ ಅಧಿಕಾರಿಗಳು ಹೋರಾಟಗಾರರ ಪೋನ್ ಸ್ವೀಕರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಓದಿರಿ:  ಕಡಬ : ಉಪವಾಸ ಸತ್ಯಾಗ್ರಹ  ಮೂರನೇ ದಿನಕ್ಕೆ | ಧರಣಿ ನಿರತ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು 

 

970×90