ವಿಶೇಷ ಚೇತನರೊಬ್ಬರ ಮನೆಗೆ ದಾರಿ ನಿರ್ಮಿಸಿ ಕೊಟ್ಟ ಕರುಣಾಮಯಿ ಹೃದಯಿ

ವಿಶೇಷ ಚೇತನರೊಬ್ಬರ ಮನೆಗೆ ದಾರಿ ನಿರ್ಮಿಸಿ ಕೊಟ್ಟ ಕರುಣಾಮಯಿ ಹೃದಯಿ

 

ಕಡಬ ಟೈಮ್,  ಸುಳ್ಯ: ಸುಳ್ಯ ತಾಲೂಕಿನ   ಆಲೆಟ್ಟಿಯ ಬಡ್ಡಡ್ಕದ  ವಿಶೇಷಚೇತನರೊಬ್ಬರಿಗೆ  ವ್ಯಕ್ತಿಯೊಬ್ಬರು  ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ.

ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್‌ ಅವರು  ರಸ್ತೆ ನಿರ್ಮಿಸಿ ಕೊಟ್ಟ ಕರುಣಾಮಯಿ ಹೃದಯಿ.ಅಂಗವಿಕಲತೆಯಿಂದ  ಬಳಳುತ್ತಿದ್ದ ರವಿ ಮೊಗೇರ  ಅವರು ತಮ್ಮ ಮನೆಗೆ ಹೋಗಲು ಮೆಟ್ಟಿಲು ಗಳನ್ನು ಅವಲಂಬಿಸಿದ್ದರು.  ಸರಕಾರದಿಂದ ಮೋಟಾರು ಸೈಕಲ್‌ ಸಿಕ್ಕಿದ್ದರೂ ಅದನ್ನು ರಸ್ತೆಯ ಬದಿ ನಿಲ್ಲಿಸಬೇಕಿತ್ತು.  ಕೂಲಿ ಕೆಲಸ ಮಾಡುವ ಇವರು ರಸ್ತೆಗೆ ಬರಬೇಕಾದರೆ ಮನೆಯವರೇ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ ಇತ್ತು.

ಈ ಕುರಿತು ತೇಜ್‌ ಕುಮಾರ್‌ ಬಡ್ಡಡ್ಕ ಅವರು ನಂದಕುಮಾರ್‌ ಅವರ ಗಮನಕ್ಕೆ ತಂದಿದ್ದರು.  ಇದಕ್ಕೆ ಸ್ಪಂದಿಸಿದ ನಂದ ಕುಮಾರ್‌ ಅವರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ರವಿ ಅವರ ಮನೆಯ ಆಸುಪಾಸಿನಲ್ಲೂ ಕೆಲವು ಮನೆಗಳಿದ್ದು ರಸ್ತೆಯಿಂದ ಅವರಿಗೂ ಉಪಯೋಗವಾಗಲಿದೆ

970×90