ಹೊಸಮಠ : ಎಸ್.ಐ ಮುಚ್ಚಿದ ಅನಧಿಕೃತ ರಸ್ತೆಯನ್ನು ಮತ್ತೆ ತೆರೆದ ಮರಳು ದಂಧೆಕೋರರು |ಪೊಲೀಸರ ಎಚ್ಚರಿಕೆಗೆ ಅಕ್ರಮ ಮರಳುಗಾರಿಕೆ  ದಿಢೀರ್  ಸ್ಥಗಿತ!

ಹೊಸಮಠ : ಎಸ್.ಐ ಮುಚ್ಚಿದ ಅನಧಿಕೃತ ರಸ್ತೆಯನ್ನು ಮತ್ತೆ ತೆರೆದ ಮರಳು ದಂಧೆಕೋರರು |ಪೊಲೀಸರ ಎಚ್ಚರಿಕೆಗೆ ಅಕ್ರಮ ಮರಳುಗಾರಿಕೆ  ದಿಢೀರ್  ಸ್ಥಗಿತ!

ಕಡಬ ಟೈಮ್ಸ್, ಹೊಸಮಠ: ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಗೆ ಬೆಂಬಲಿಸುವ  ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ  ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ  ಎಚ್ಚರಿಕೆ ನೀಡಿದ್ದರೂ ಕಡಬದ ತಾಲೂಕಿನ  ಹಲವೆಡೆ ಅಕ್ರಮ ಮರಳುಗಾರಿಕೆ ಮುಂದುವರಿದಿದೆ.

ಕಡಬ ತಾಲೂಕಿನ   ಕುಟ್ರುಪಾಡಿ ಗ್ರಾ.ಪಂ ವ್ಯಾಪ್ತಿಯ ಹೊಸಮಠ ಸೇತುವೆ  ಅನಧಿಕೃತ ರಸ್ತೆ ನಿರ್ಮಿಸಿ  ಅಕ್ರಮ ಮರಳುಗಾರಿಕೆ ಆರಂಭವಾಗಿದ್ದು  ಇದೀಗ ಪೊಲೀಸರ ಎಚ್ಚರಿಕೆಯ  ಹಿನ್ನೆಲೆಯಲ್ಲಿ ದಿಢೀರ್  ಸ್ಥಗಿತಗೊಂಡಿದೆ.

ಜೆಸಿಬಿ ಬಳಸಿ ಕಳೆದ ಒಂದು ವಾರದಿಂದ ನಿರಂತರ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಮಾಧ್ಯಮಗಳಿಗೆ ಮಾಹಿತಿ  ಸಿಕ್ಕಿರುವ ಗುಮಾನಿಯಲ್ಲಿ  ಮಾರ್ಚ್ 11 ರಂದು ಸೇತುವೆ ಬಳಿ ಅಕ್ರಮ ಮರಳುಗಾರಿಕೆಯಲ್ಲಿ ನಿರತವಾಗಿದ್ದ ಹಲವು ವಾಹನಗಳು ಸ್ಥಳದಿಂದ ಏಕಾಏಕಿ ಪರರಾರಿಯಾಗಿದ್ದು ಸದ್ಯ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿದೆ.    ಮೂರು ತಿಂಗಳ ಹಿಂದೆಯಷ್ಟೇ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರು  ಖುದ್ದು  ಭೇಟಿ ನೀಡಿ ಅನಧಿಕೃತ ರಸ್ತೆಯನ್ನು ಮುಚ್ಚಿದ್ದರು. ಇದೀಗ ಮತ್ತೆ ಮುಚ್ಚಿದ್ದ ಬೇಲಿಯನ್ನು ತೆರದು ಅಕ್ರಮ ದಂದೆಕೋರರು ಪೊಲೀಸರಿಗೆ ಸೆಡ್ಡು ಹೊಡೆದಿದ್ದಾರೆ.

970×90