ಐತ್ತೂರು: ಮೀಸಲು ಅರಣ್ಯದೊಳಗೆ ಅನಧಿಕೃತ ರಸ್ತೆ| ಅರಣ್ಯಾಧಿಕಾರಿಗಳ ಸಾಥ್ ನಲ್ಲಿ  ರಾತ್ರಿ-ಹಗಲು ಅಕ್ರಮ ಮರಳುಗಾರಿಕೆ

ಐತ್ತೂರು: ಮೀಸಲು ಅರಣ್ಯದೊಳಗೆ ಅನಧಿಕೃತ ರಸ್ತೆ| ಅರಣ್ಯಾಧಿಕಾರಿಗಳ ಸಾಥ್ ನಲ್ಲಿ  ರಾತ್ರಿ-ಹಗಲು ಅಕ್ರಮ ಮರಳುಗಾರಿಕೆ

ಕಡಬ ಟೈಮ್ಸ್, ಐತ್ತೂರು ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ  ಐತ್ತೂರು ಮೀಸಲು ಅರಣ್ಯದ ಮೂಲಕ ಅನಧಿಕೃತ ರಸ್ತೆ  ನಿರ್ಮಿಸಿ  ಅರಣ್ಯಾಧಿಕಾರಿಗಳ ಬೆಂಬಲದೊಂದಿಗೆ   ಮೂರು ವರ್ಷಗಳಿಂದ  ನಿರಂತರ  ಅಕ್ರಮ ಮರಳು ಸಾಗಾಟವಾಗುತ್ತಿದೆ.

ಕೆ.ಎಫ್.ಡಿ.ಸಿ  ಕುಮಾರಧಾರ ಘಟಕದ  ಮಾಯಿಪಾಜೆ ಎಂಬಲ್ಲಿ ರಬ್ಬರ್  ಫ್ಲಾಂಟೇಶನ್ ಒಳಗಿನಿಂದಲೇ   ಅನಧಿಕೃತ ರಸ್ತೆ ನಿರ್ಮಾಣವಾಗಿದ್ದು  ಅರಣ್ಯ ಇಲಾಖೆ,   ಪೊಲೀಸ್ ಇಲಾಖೆ  ಮತ್ತು ಕಂದಾಯ ಇಲಾಖೆಯ ಸಹಕಾರದೊಂದಿಗೆ   ಲೋಕಲ್ ಜನ ನಾಯಕನೊಬ್ಬ  ನಿರಂತರ ಅಕ್ರಮ  ಮರಳು ಸಾಗಾಟ ದಲ್ಲಿ  ತೊಡಗಿಕೊಂಡಿರುವುದಾಗಿ  ಸ್ಥಳೀಯರು ಆರೋಪಿಸಿದ್ದಾರೆ.

ಇದೇ ಅನಧಿಕೃತ ರಸ್ತೆ ಮೂಲಕ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ಸ್ಥಳೀಯರೊಬ್ಬರು  ಮಾಹಿತಿ  ನೀಡಿದಕ್ಕೆ ಅಕ್ರಮ ಪ್ರವೇಶ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಅರಣ್ಯಾಧಿಕಾರಿಗಳು ಕೇಸು ದಾಖಲಿಸಿ ಗ್ರಾಮಸ್ಥನನ್ನು ಜೈಲಿಗಟ್ಟಿದ್ದರು. ಆ ಬಳಿಕ  ಅರಣ್ಯಾಧಿಕಾರಿಗಳ ಬಳಿ ಅನಧಿಕೃತ ರಸ್ತೆ ಬಗ್ಗೆ ವಿಚಾರಿಸಿದಾಗ ಅಂತಹ ರಸ್ತೆಯೇ ಇಲ್ಲ ಎಂದಿದ್ದರು.

ಮಾಧ್ಯಮ ಮಿತ್ರರು ಅರಣ್ಯಾಧಿ ಇತ್ತೀಚೆಗೆ  ಕಡಬಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ವೇಳೆ ಮಾಧ್ಯಮ ಮಿತ್ರರು ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ನೀಡಿದ್ದರು,  ಈ ವೇಳೆ ತಹಶೀಲ್ದಾರ್ ಅವರಿಗೆ ರಸ್ತೆ ಬಂದ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಓಟೆಕಜೆ ಎಂಬಲ್ಲಿ ರಸ್ತೆಯನ್ನು ಮುಚ್ಚಿದ್ದರು.ಆದರೆ ಮಾಯಿಪಾಜೆಯಲ್ಲಿ ಚಿನ್ನದ ಮೊಟ್ಟೆಯಂತಿರುವ ಮರಳು ನಿಕ್ಷೇಪವನ್ನು ಬಂದ್ ಮಾಡಲಾಗಿಲ್ಲ. ಅಧಿಕಾರಿಗಳ ಸಾಥ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.

ಮಾಯಿಪಾಜೆಯಲ್ಲಿ ನೈಸರ್ಗಿಕ  ಸಂಪತ್ತನ್ನು ಲೂಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ  ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಅರಣ್ಯ  ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಧೈರ್ಯವಿಲ್ಲ .  ಯಾಕೆಂದರೆ ಇಲ್ಲಿ ಅಕ್ರಮ ಚಟುವಟಿಕೆ ನಿಂತರೆ  ಅಧಿಕಾರಿಗಳ ಕೈಗೆ ಸೇರುವ ಕಪ್ಪ ಕಾಣಿಕೆ ನಿಲ್ಲುತ್ತೆ!

970×90