ಕೊಕ್ಕಡ: ಪಟ್ರಮೆಯಲ್ಲಿ ಮರ ಕಡಿಯುವ ವೇಳೆ ಮೂವರು ಯುವಕರ ದುರ್ಮರಣ

ಕೊಕ್ಕಡ:  ಪಟ್ರಮೆಯಲ್ಲಿ ಮರ ಕಡಿಯುವ ವೇಳೆ  ಮೂವರು ಯುವಕರ ದುರ್ಮರಣ

ಕಡಬ ಟೈಮ್ಸ್, ಪಟ್ರಮೆ:  ಮರ ಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರದಡಿಗೆ ಬಿದ್ದು ಮೂವರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಮಾ.9 ರಂದು ಕೊಕ್ಕಡ ಸಮೀಪದ ಪಟ್ರಮೆಯಲ್ಲಿ ಮಧ್ಯಾಹ್ನ ನಡೆದಿದೆ.

ಪಟ್ರಮೆ  ಗ್ರಾಮದ ಅನಾರು ಸಮೀಪದ ಕಾಯಿಲ ಎಂಬಲ್ಲಿ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ  ದೂಪದ ಮರವೊಂದನ್ನು  ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ನಡೆದಿದೆ.

ಪಟ್ರಮೆ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(21),ಸೇಸಪ್ಪ ಪೂಜಾರಿ ಎಂಬವರ ಮಗ ಸ್ವಸ್ತಿಕ್ (23)ಮತ್ತು ಇನ್ನೋರ್ವ ಕನ್ಯಾಡಿ ಮೂಲದ ಯುವಕ  ಕೂಡಾ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

970×90