ಬೆಳ್ಳಾರೆ: ದಲಿತ ಮಹಿಳೆಯ ಮನೆಧ್ವಂಸ ಪ್ರಕರಣ| ಠಾಣೆ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ

ಬೆಳ್ಳಾರೆ: ದಲಿತ ಮಹಿಳೆಯ ಮನೆಧ್ವಂಸ ಪ್ರಕರಣ| ಠಾಣೆ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ
ಮೂರು ದಿನದೊಳಗೆ ಅರೋಪಿಗಳನ್ನು ಬಂಧಿಸದಿದ್ದಲ್ಲಿ ಡಿವೈಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ-  ದಲಿತ ಸಂಘಟನೆಗಳ ಎಚ್ಚರಿಕೆ

ಕಡಬ ಟೈಮ್ಸ್, ಬೆಳ್ಳಾರೆ: ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಡಮಂಗಲದ  ದಲಿತ ಮಹಿಳೆಯ ಮನೆ ಧ್ವಂಸ ಮತ್ತು ಜಾತಿನಿಂದನೆ ಮತ್ತು ಕೊಲೆ ಬೆದರಿಕೆ ವಿಷಯಕ್ಕೆ ಸಂಬಂಧಿಸಿದಂತೆ   ಆರೋಪಿಗಳನ್ನು ಬಂಧಿಸದ ಬೆಳ್ಳಾರೆ ಠಾಣೆಯ ವಿರುದ್ದ   ಅಂಬೇಡ್ಕರ್ ರಕ್ಷಣಾ ವೇದಿಕೆ ಮತ್ತು ದಲಿತ್ ಸೇವಾ ಸಮಿತಿ  ಹಾಗೂ ಮುಗೇರ ಸಂಘ ಜಂಟಿಯಾಗಿ ಮಾ.9 ರಂದು   ಶಾಂತಿಯುತ ಪ್ರತಿಭಟನೆ ನೆಡೆಸಿದೆ.

ಪ್ರತಿಭಟನೆಯನ್ನು  ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡರು ಅರೋಪಿಗಳನ್ನು  ಬಂಧಿಸಲು ಇಲಾಖೆ ವಿಫಲಾಗಿದೆ,  ಮೂರು ದಿನದ ಒಳಗಡೆ ಬಂಧಿಸದಿದ್ದಲ್ಲಿ  ಡಿವೈಎಸ್ಪಿ  ಕಚೇರಿ ಎದುರು  ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.  ಮನೆ ಧ್ವಂಸ ಮಾಡಿರುವ ಜಾಗದಲ್ಲಿಯೇ ವಾರದೊಳಗೆ  ಮಹಿಳೆಗೆ  ಸಂಘಟನೆಯಿಂದ ಮನೆ ನಿರ್ಮಿಸಿ ಕೊಡಲಾಗುವುದು  ಇದಕ್ಕೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದರು.

ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ  ಸೇಸಪ್ಪ ಬೆದ್ರಕಾಡು, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ,  ಅಣ್ಣಿ ಎಳ್ತಿಮಾರ್ ಮೊದಲಾದವರು ಮಾತನಾಡಿದರು. ಪಾಟಾಜೆ,ಉಪಾಧ್ಯಕ್ಷ ಮಂಜುನಾಥ ಶಾಂತಿಮೂಲೆ,ರಾಜೇಶ ನೆಟ್ಟಾರು,ಕರುಣಾಕರ,ಅಚ್ಚುತ ಮಲ್ಕಜೆ, ವಸಂತ ಕುದ್ಪಾಜೆ ,ರಾಘವ ಕಳಾರ, ಆನಂದ ನಿಡ್ಮಾರ್, ಅಣ್ಣಿ ಎಲ್ತಿಮಾರ್ , ದಿನೇಶ ಅಗಲ್ತಾಡಿ ಸೇರಿದಂತೆ ವಿವಿಧ ಭಾಗಗಳಿಂದ ದಲಿತ ಸಂಘಟನೆಗಳ  ಮುಖಂಡರು ಕಾರ್ಯಕರ್ತರು ಆಗಮಿಸಿದ್ದರು.

970×90