ನೆಲ್ಯಾಡಿಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕಡಬದ ಸರ್ಕಾರಿ ಕಾಲೇಜಿಗೆ ಪ್ರಥಮ ಸ್ಥಾನ

ನೆಲ್ಯಾಡಿಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ  ಕಡಬದ ಸರ್ಕಾರಿ ಕಾಲೇಜಿಗೆ ಪ್ರಥಮ ಸ್ಥಾನ

ಕಡಬ ಟೈಮ್ಸ್,ಕಡಬ ಪಟ್ಟಣ:  ನೆಲ್ಯಾಡಿಯಲ್ಲಿ ನಡೆದ ಕಡಬ ತಾಲೂಕು ಮಟ್ಟದ ತ್ರೋಬಾಲ್ ಮತ್ತು ಕಬಡ್ಡಿ ಪಂದ್ಯಾಟದಲ್ಲಿ  ಬಾಲಕಿಯರ ವಿಭಾಗದಲ್ಲಿ ಕಡಬ ಸರ್ಕಾರಿ ಪ.ಪೂ.ಕಾಲೇಜು ಪ್ರಥಮ ಸ್ಥಾನ ಪಡೆದಿದೆ.

ಮಾ.೨ರಂದು ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಈ  ಸ್ಪರ್ಧೆ ನಡೆದಿದ್ದು  ಫೈನಲ್ ಪಂದ್ಯದಲ್ಲಿ ಕಡಬ ಸರ್ಕಾರಿ ಪ.ಪೂ.ಕಾಲೇಜು ತಂಡವು  ಶ್ರೀ ರಾಮಕುಂಜೇಶ್ವರ  ಪದವಿಪೂರ್ವ ಕಾಲೇಜು ತಂಡವನ್ನು  36-12 ಅಂಕಗಳಿಂದ  ಪರಾಭವಗೊಳಿಸಿ  ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದೆ.

ವಿಜೇತ ತಂಡಕ್ಕೆ ಆತಿಥೇಯ  ಕಾಲೇಜಿನ ಪ್ರಾಂಶುಪಾಲ ಶ್ರೀ  ಏಲಿಯಾಸ್ ಎಮ್ ಕೆ ಪ್ರಶಸ್ತಿ ವಿತರಿಸಿದರು. ಕಾಲೇಜಿನ ಮಹಿಳಾ ಕಬಡ್ಡಿ  ತಂಡವನ್ನು ಕ್ರೀಡಾಧಿಕಾರಿ  ಸುಕೇಶ  ಚಂದ್ರಶೇಖರ ಮತ್ತು ಕಬಡ್ಡಿ ತರಬೇತುದಾರ ಶ್ರೀ ಸುರೇಶ್  ಕೋರಿಯರ್ ಇವರನ್ನು ಪ್ರಾಂಶುಪಾಲ  ಜನಾರ್ದನ  ಕೆ.ಎನ್ ಅಭಿನಂದಿಸಿದರು . ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಭಾರತಿ ಜಿ ಮತ್ತು ಕುಮಾರಿ ಭವ್ಯ ಸಹಕರಿಸಿದರು.

970×90