ನೆಲ್ಯಾಡಿ: ಕಡಬ ತಾ| ಪ.ಪೂ.ಕಾಲೇಜು ಮಟ್ಟದ ತ್ರೋಬಾಲ್, ಕಬಡ್ಡಿ ಪಂದ್ಯಾಟ

ನೆಲ್ಯಾಡಿ: ಕಡಬ ತಾ| ಪ.ಪೂ.ಕಾಲೇಜು ಮಟ್ಟದ ತ್ರೋಬಾಲ್, ಕಬಡ್ಡಿ ಪಂದ್ಯಾಟ

ಕಡಬ ಟೈಮ್ಸ್, ನೆಲ್ಯಾಡಿ:  ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿ ಇದರ ಸಹಯೋಗದಲ್ಲಿ ಕಡಬ ತಾಲೂಕು ಮಟ್ಟದ ತ್ರೋಬಾಲ್ ಮತ್ತು ಕಬಡ್ಡಿ ಪಂದ್ಯಾಟ ಮಾ.೨ರಂದು ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ಅವರು ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮವನ್ನು  ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಎನ್., ಪಂದ್ಯಾಟ ಉದ್ಘಾಟಿಸಿದರು ಕಾಲೇಜಿನ ಪ್ರಾಂಶುಪಾಲ ಏಲಿಯಾಸ್ ಎಂ.ಕೆ., ಸ್ವಾಗತಿಸಿದರು.

ಕಬಡ್ಡಿ ಬಾಲಕರ ವಿಭಾಗದಲ್ಲಿ ಪ್ರಥಮ- ಸೈಂಟ್ ಜೋಕಿಮ್ಸ್ ಪ.ಪೂ.ಕಾಲೇಜು ಕಡಬ, ದ್ವಿತೀಯ-ದುರ್ಗಾಂಬ ಪ.ಪೂ.ಕಾಲೇಜು ಅಲಂಕಾರು. ಬಾಲಕಿಯರ ವಿಭಾಗದಲ್ಲಿ ಪ್ರಥಮ- ಸರ್ಕಾರಿ ಪ.ಪೂ.ಕಾಲೇಜು ಕಡಬ, ದ್ವಿತೀಯ-ಕುಕ್ಕೆ ಸುಬ್ರಹ್ಮಣ್ಯ ಪ.ಪೂ.ಕಾಲೇಜು ಸುಬ್ರಹ್ಮಣ್ಯ ತಂಡ ಪಡೆದುಕೊಂಡಿದೆ.

ತ್ರೋಬಾಲ್ ಬಾಲಕರ ವಿಭಾಗದಲ್ಲಿ ಪ್ರಥಮ- ಕುಕ್ಕೆ ಸುಬ್ರಹ್ಮಣ್ಯ ಪ.ಪೂ.ಕಾಲೇಜು ಸುಬ್ರಹ್ಮಣ್ಯ, ದ್ವಿತೀಯ- ಸಂತ ಜಾರ್ಜ್ ಪ.ಪೂ.ಕಾಲೇಜು ನೆಲ್ಯಾಡಿ, ಬಾಲಕಿಯರ ವಿಭಾಗದಲ್ಲಿ ಪ್ರಥಮ-ಕುಕ್ಕೆ ಸುಬ್ರಮಣ್ಯ ಪ.ಪೂ.ಕಾಲೇಜು ಸುಬ್ರಹ್ಮಣ್ಯ, ದ್ವಿತೀಯ- ಸರ್ಕಾರಿ ಪ.ಪೂ ಕಾಲೇಜು ಕಾಣಿಯೂರು ಪಡೆದುಕೊಂಡಿದೆ.

 

ಸಂಸ್ಥೆಯ ದೈಹಿಕ ಉಪನ್ಯಾಸಕ ಮಹಮ್ಮದ್ ಹ್ಯಾರಿಸ್ರವರ ನೇತೃತ್ವದಲ್ಲಿ ಅತಿಥಿಗಳು ಕ್ರೀಡಾ ಪಟುಗಳನ್ನು ಪರಿಚಯಿಸಿಕೊಂಡು ಶುಭ ಹಾರೈಸಿದರು.  ಕಡಬ ತಾಲೂಕಿನ ವಿವಿಧ ಕಾಲೇಜುಗಳ ದೈಹಿಕ ಉಪನ್ಯಾಸಕರು, ತಂಡದ ವ್ಯವಸ್ಥಾಪಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

970×90