ಕಡಬದಲ್ಲಿ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ |ನಡು ರಸ್ತೆಯಲ್ಲಿ ಚಪಾತಿ ಬಿಸಿ ಮಾಡುವ ಮೂಲಕ ಆಕ್ರೋಶ

ಕಡಬದಲ್ಲಿ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ |ನಡು ರಸ್ತೆಯಲ್ಲಿ ಚಪಾತಿ ಬಿಸಿ ಮಾಡುವ ಮೂಲಕ ಆಕ್ರೋಶ

ಕಡಬ ಟೈಮ್ಸ್,ಕಡಬ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸರ್ವ ಪಕ್ಷಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಾರ್ಚ್ 1 ರಂದು ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆ ರಸ್ತೆಯಲ್ಲಿ ಕಟ್ಟಿಗೆಯಲ್ಲಿ ಒಲೆ ಉರಿಸಿ ಚಪಾತಿ ಬಿಸಿ ಮಾಡುವ ಮೂಲಕ ಅಣುಕು ಪ್ರದರ್ಶನ ಮಾಡಿ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಕಡಬ ತಹಶಿಲ್ದಾರ್ ಮೂಲಕ ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಾಕೆ ಮಾಧವ ಗೌಡ,  ಜೆಡಿಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಸಂತ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಮಾತನಾಡಿದರು. ಎಸ್‌ಡಿಪಿಐ ಮುಖಂಡರು,ಜೆಡಿಯಸ್ ಮುಖಂಡರು  ಭಾಗವಹಿಸಿದ್ದರು.

970×90