ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ

ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ

ಕಡಬ ಟೈಮ್ಸ್,  ನೆಲ್ಯಾಡಿ: ಇಲ್ಲಿನ  ಹೊಸಮಜಲು ಎಂಬಲ್ಲಿ ಫೆ.೨೭ ರ ಮುಂಜಾನೆ   ಗ್ಯಾಸ್  ಸಾಗಾಟದ ಟ್ಯಾಂಕರ್  ಮತ್ತು  ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಢಿಕ್ಕಿಯ  ಪರಿಣಾಮ ಡೀಸೆಲ್ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಡೀಸೆಲ್‌ನ ಟ್ಯಾಂಕರ್ ನಡುವೆ ಹೊಸಮಜಲು ಸಮೀಪ ಢಿಕ್ಕಿ ಸಂಭವಿಸಿದೆ.  ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

970×90