ಈ ನಕಲಿ ಆ್ಯಪ್ ನಿಮ್ಮ ಮೊಬೈಲ್ ನಲ್ಲಿದ್ದರೆ ಡಿಲೀಟ್ ಮಾಡಿಬಿಡಿ

ಈ ನಕಲಿ ಆ್ಯಪ್ ನಿಮ್ಮ ಮೊಬೈಲ್ ನಲ್ಲಿದ್ದರೆ ಡಿಲೀಟ್ ಮಾಡಿಬಿಡಿ

ಕಡಬ ಟೈಮ್ಸ್ (KADABA TIMES):ತಂತ್ರಜ್ಞಾನ ಮಾಹಿತಿ: ಧ್ವನಿ ಮೂಲಕ ಸಂದೇಶಗಳನ್ನು ರವಾನಿಸುವ  ಆ್ಯಪ್ ಗಳ ಪಟ್ಟಿಯಲ್ಲಿ ಕ್ಲಬ್ ಹೌಸ್ ಕೂಡ ಒಂದಾಗಿದೆ.  ಈ ನಡುವೆ ನಕಲಿ ಕ್ಲಬ್ ಹೌಸ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸೇರಿಕೊಂಡಿದೆ.

ಕಳೆದ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆ್ಯಪಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆಗೊಂಡ ಈ ಆ್ಯಪ್, ಈಗಾಗಲೇ ಬರೊಬ್ಬರಿ 8.1 ಮಿಲಿಯನ್ ಡೌನ್ ಲೋಡ್  ಹೊಂದುವ ಮೂಲಕ ಅತೀ ಹೆಚ್ಚು ಡೌನ್ ಲೋಡ್ ಕಂಡ   ಆ್ಯಪ್ ಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.

ಈ ನಕಲಿ ಆ್ಯಪ್ ಗಳನ್ನು ಬೇರೆ ಬೇರೆ ಡೆವಲಪರ್ ಗಳು ಸಿದ್ಧಪಡಿಸಿದಲ್ಲದೆ  ನಕಲಿ ಲೋಗೊ ವನ್ನೂ ಬಳಸಲಾಗಿದೆ. ಅಲ್ಲದೆ ಒಂದು ಆ್ಯಪ್ ನಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಟೋಪಿ ಧರಿಸಿರುವ ವ್ಯಕ್ತಿ ಚಿತ್ರವನ್ನು ಒಳಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ನಡುವೆ ಇನ್ನೊಂದು ಕ್ಲಬ್ ಹೌಸ್ ಅಪ್ಲಿಕೇಶನ್ ಸಾಪ್ಟ್ ವೇರ್ ತಂಡಗಳಿಗೆ ಪ್ರೋಜೆಕ್ಟ್ ಮ್ಯಾನೇಜ್ ಮೆಂಟ್ ಟೂಲ್ ಗಳನ್ನು ಒದಗಿಸುತ್ತಿದೆ. ಹಲವಾರು ಆ್ಯಂಡ್ರಾಯ್ಡ್ ಬಳಕೆದಾರರು ಈ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಟೂಲ್ ಗಳನ್ನು ಡೌನ್ ಲೋಡ್ ಮಾಡಿದ್ದು, ನಕಲಿ ಎಂದು ತಿಳಿದ ಬಳಿಕ ಅನ್ಇನ್ ಸ್ಟಾಲ್ ಮಾಡಿದ್ದಾರೆ .ನೀವು ಎಚ್ಚರವಾಗಿರಿ.

970×90