ಬಳ್ಪ:ಸಂಸದರ ಆದರ್ಶ ಗ್ರಾಮದ ಈ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ

ಬಳ್ಪ:ಸಂಸದರ ಆದರ್ಶ ಗ್ರಾಮದ ಈ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ

ಕಡಬ ಟೈಮ್ಸ್ (KADABA TIMES):ಪಂಜ: ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮದ ಬಳ್ಪ ಗ್ರಾಮದ ಬಡ ಕುಟುಂಬದ ಮನೆಯೊಂದು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದೆ. ಮನೆಯ ಶಾಲಾ ಮಕ್ಕಳು ಡೀಸೆಲ್ ನಿಂದ ಉರಿಸುವ ದೀಪದಲ್ಲೇ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಳ್ಪ ಗ್ರಾಮದ ಅರ್ಗುಡಿ ಕುಶಾಲಪ್ಪ ಗೌಡ ಎಂಬುವರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದಿರುವುದಾಗಿದೆ.ಇವರು ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದರೆ, ಪತ್ನಿ ಬೀಡಿ ಕಟ್ಟಿ ಮಕ್ಕಳಿಬ್ಬರನ್ನು ಓದಿಸುತ್ತಿದ್ದಾರೆ ಮೊದಲನೆಯ ಮಗ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಎರಡನೇ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಗೆ ತಿಂಗಳಿಗೆ ಆರು ಲೀಟರ್ ಡೀಸೆಲ್ ದೀಪ ಉರಿಸಲು ಬೇಕಾಗಿದ್ದು ಡೀಸೆಲ್ ದೀಪದಿಂದ ಬರುವ ಹೊಗೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ.ಇದು ಈ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸಂಸದರ ಆದರ್ಶ ಗ್ರಾಮವಾದರೂ ಗ್ರಾಮದ ಈ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾ.ಪಂ ಮತ್ತು ಮೆಸ್ಕಾಂ ಇಲಾಖೆಗೂ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ನಡುವೆ ವಿದ್ಯುತ್ ಮೀಟರ್ ಬಂದಿದೆಯೆಂದು ಹೇಳಿ ಯಾರೋ ಒಬ್ಬ ಖತರ್ನಾಕ್ ವ್ಯಕ್ತಿ ಕುಶಾಲಪ್ಪ ಗೌಡರ ಕೈಯಿಂದ ವಿದ್ಯುತ್ ಮೀಟರ್ ಗಾಗಿ 1,200 ರೂ ಎನ್ನಲಾಗಿದೆ.ಕುಶಾಲಪ್ಪ ಗೌಡರ 75 ಸೆಂಟ್ಸ್ ಜಾಗದ ಪಕ್ಕದಲ್ಲಿ ಮನೆಯ ನಾಲ್ಕು ಬದಿಗಳಲ್ಲಿ ಬೇರೆ ವ್ಯಕ್ತಿಗಳ ತೋಟ ಇರುವ ಜಾಗವಿದ್ದು ತಮ್ಮ ಜಾಗದಲ್ಲಿ ವಿದ್ಯುತ್ ತಂತಿ ಎಳೆಯಲು ಅವಕಾಶ ನೀಡದೇ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ

970×90