ನಾಳೆಯಿಂದ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ| ಈ ನಾಲ್ಕು ಗಡಿಗಳು ಮಾತ್ರ ಓಪನ್

ನಾಳೆಯಿಂದ  ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ| ಈ  ನಾಲ್ಕು ಗಡಿಗಳು ಮಾತ್ರ ಓಪನ್

ಕಡಬ ಟೈಮ್ಸ್ (KADABA TIMES):ಕಡಬ: ಕೇರಳದಲ್ಲಿ ಕೋವಿಡ್ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಮಂಗಳೂರು ಪ್ರವೇಶಿಸುವ ತಲಪಾಡಿ, ಸಾರಡ್ಕ, ಮೇನಾಲ ಮತ್ತು ಜಾಲ್ಸೂರು ಈ ನಾಲ್ಕು ಗಡಿ ಹೊರತುಪಡಿಸಿ ಉಳಿದೆಲ್ಲಾ ಗಡಿಗಳು ನಾಳೆಯಿಂದ(ಫೆ.22) ಬಂದ್  ಆಗಲಿದೆ.

ಕೇರಳದಿಂದ ಬರುವ ಎಲ್ಲ ಪ್ರಯಾಣಿಕರು ಕೋವಿಡ್ 19 ನೆಗೆಟಿವ್ ವರದಿ ತರುವುದು ಕಡ್ಡಾಯ. ಗಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಲಿದ್ದಾರೆ.

“ಕೇರಳದಿಂದ ಮಂಗಳೂರು ಪ್ರವೇಶಿಸುವ ತಲಪಾಡಿ, ಸಾರಡ್ಕ, ಮೇನಾಲ ಮತ್ತು ಜಾಲ್ಸೂರು ಹೊರತು ಪಡಿಸಿ ಉಳಿದೆಲ್ಲಾ ಗಡಿಗಳು ಬಂದ್” – ದ.ಕ ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ

970×90