ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ-ಸಚಿವ ಎಸ್.ಅಂಗಾರ

ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನಿರುವುದಿಲ್ಲ-ಸಚಿವ ಎಸ್.ಅಂಗಾರ

ಕಡಬ ಟೈಮ್ಸ್ (KADABA TIMES):ಸುಳ್ಯ: ಎಲ್ಲ ಇಲಾಖೆಯ ಅಧಿಕಾರಿಗಳು ಜನರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಇಲಾಖೆಗಳಲ್ಲಿ ಕೆಲಸಗಳಾಗುತ್ತಿಲ್ಲ ಎಂದು ದೂರುಗಳು ಬಂದರೆ ನಾವು ಸುಮ್ಮನಿರುವುದಿಲ್ಲ. ಜತೆಗೆ ಪ್ರಸ್ತುತ ವರ್ಷದಲ್ಲಿ ಬಂದ ಎಲ್ಲ ಅನುದಾನಗಳಲ್ಲಿಯೂ ಕಾಮಗಾರಿ ಆಗಬೇಕು ಎಂದು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆ. ೧೫ ರಂದು ಸುಳ್ಯ ತಾ.ಪಂ. ನಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಿಡಬ್ಲ್ಯೂಡಿ, ಜಿ.ಪಂ. ಇಂಜಿನಿಯರಿಂಗ್, ಕುಡಿಯುವ ನೀರು ಇಲಾಖೆಯ ಇಂಜಿನಿಯರ್ ರಿಂದ ಮಾಹಿತಿ ಪಡೆದು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಿ.ಯಾವುದೇ ದೂರುಗಳು ಸಾರ್ವಜನಿಕ ರಿಂದ ಬರಬಾರದು. ಮತ್ತು ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಮೆಸ್ಕಾಂ ಇಲಾಖೆಯವರು ತಮ್ಮ ಬೇಡಿಕೆಯ ಪಟ್ಟಿ ಸಿದ್ಧ ಪಡಿಸಿಕೊಂಡು ನಮಗೆ ನೀಡಬೇಕು. 15 ದಿನದ ಒಳಗೆ 110 ಕೆ.ವಿ. ಸಂಬಂಧಿಸಿದಂತೆ ಮುಖ್ಯಮಂತ್ರಿ ಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ನಮ್ಮ ಬೇಡಿಕೆಯನ್ನು ಅಲ್ಲಿಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಕೆ.ಪಿ.ಟಿ.ಸಿ.ಎಲ್., ಅರಣ್ಯ, ಮೆಸ್ಕಾಂ ಇಲಾಖೆಯವರು ಈ ಸಭೆಯಲ್ಲಿರುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು. ಸುಳ್ಯ ಸರಕಾರಿ ಆಸ್ಪತ್ರೆಗೆ ಕೋಲ್ಡ್ ಸ್ಟೋರೇಜ್ ಅಗತ್ಯತೆಯ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಬೇಡಿಕೆ ಮುಂದಿಟ್ಟರು. ಸುಳ್ಯ ಸಿ.ಡಿ.ಪಿ.ಒ. ಕಚೇರಿಯ ಹೊಸ ವಾಹನದ ಬೇಡಿಕೆಯ ನ್ನು ಸಿ.ಡಿ.ಪಿ.ಒ. ರಶ್ಮಿ ಅಶೋಕ್ ಮಂಡಿಸಿದರು.
ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಇರುವ ಬಗ್ಗೆ ಸುಳ್ಯ ಬಿ.ಇ.ಒ. ಕಚೇರಿ ಸಿಬ್ಬಂದಿ ಸಭೆಗೆ ಮಾಹಿತಿ ನೀಡಿದರು. ಕೊಲ್ಲಮೊಗ್ರದಲ್ಲಿ ಮಳೆಹಾನಿಗೊಳಗಾದ 9 ಕುಟುಂಬಕ್ಕೆ ಇನ್ನೂ ನಿವೇಶನ ಆಗದಿರುವ ಬಗ್ಗೆ ವಸತಿ ನೋಡೆಲ್ ಸಂತೋಷ್ ಮಾಹಿತಿ ನೀಡಿದರು. ಭಾಗಶಃ ಅರಣ್ಯ ಎಂದಿರುವುದರಿಂದ ಅಲ್ಲಿ ಜಾಗ ನೀಡಲು ಸಮಸ್ಯೆ ಆಗುವ ಕುರಿತು ರೇಂಜರ್ ರಾಘವೇಂದ್ರ ಮಾಹಿತಿ ನೀಡಿದರು. ಈ ಕುರಿತು ಚರ್ಚೆ ನಡೆದು ಭಾಗಶಃ ಅರಣ್ಯ ಆರ್ ಟಿ ಸಿ ಯಲ್ಲಿ ದಾಖಲಾದ ಕುರಿತು ಮೂಲ ದಾಖಲೆ ನೀಡುವಂತೆ ತಹಶೀಲ್ದಾರ್ ರಿಗೆ ಸೂಚನೆ ನೀಡಿದರು. ಕೆ.ಎಸ್. ಆರ್.ಟಿ.ಸಿ. ಸಂಬಂಧಿಸಿದಂತೆ ಹಿಂದಿನ ರೂಟ್ ಮುಂದುವರಿಸಬೇಕು. ಸಾರ್ವಜನಿಕ ರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಚಿವರು ಹೇಳಿದರು.
ತಾಲೂಕು ಅಂಬೇಡ್ಕರ್ ಭವನಕ್ಕೆ ಬರಬೇಕಾದ ಅನುದಾನ ಬಿಡುಗಡೆಯಾಗುತ್ತದೆ. ಮುಂದಿನ ಎಪ್ರಿಲ್ ಒಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

970×90