ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ|ಮಠದ ಸ್ವಾಮೀಜಿಯವರನ್ನು ಕಾರ್ಯಕ್ರಮದಿಂದ ದೂರ ಇಟ್ಟ ಸಂಘಟಕರು!

ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ|ಮಠದ ಸ್ವಾಮೀಜಿಯವರನ್ನು ಕಾರ್ಯಕ್ರಮದಿಂದ ದೂರ ಇಟ್ಟ ಸಂಘಟಕರು!

ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯ :ಸುಬ್ರಹ್ಮಣ್ಯದ ವಲ್ಲಿಶ ಸಭಾ ಭವನದಲ್ಲಿ  ಫೆ.೨೪ರಂದು ನಡೆಯುವ ಕಡಬ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದಿಂದ  ಸಮ್ಮೇಳನದ ಗೌರವ ಅಧ್ಯಕ್ಷ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಯವರನ್ನು ಕೈಬಿಟ್ಟಿದ್ದು ಸಾಹಿತ್ಯ ಅಭಿಮಾನಿಗಳಲ್ಲಿ ಹಲವು ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ.

ಧಾರ್ಮಿಕ ಸಾಹಿತ್ಯದ ಮೂಲಕ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಸ್ವಾಮೀಜಿಯರಿಗೆ ಸಮಿತಿಯಲ್ಲಿ ಗೌರವ ಅಧ್ಯಕ್ಷ ಸ್ಥಾನ ನೀಡಿ ಬಳಿಕ ಅಗೌರವ ತೋರಿದಲ್ಲದೆ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸ್ವಾಮೀಜಿಯ ಕಾರ್ಯ ಕ್ಷೇತ್ರದಲ್ಲೇ ಅವಮಾನ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಕುಕ್ಕೆ ದೇಗುಲದ ಹಿತ್ತಾಸಕ್ತಿಗೆ ಮತ್ತು ಅಭಿವೃದ್ದಿಗೆ ವಿರುದ್ದವಾಗಿ ನಡೆದುಕೊಂಡು ಬಂದಿರುವವರನ್ನು ವೇದಿಕೆಗೆ ಆಹ್ವಾನಿಸದಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಭಕ್ತರ ಹಿತ ರಕ್ಷಣಾ ವೇದಿಕೆಯು ಸಮ್ಮೇಳನದ ಕಾರ್ಯಾಧ್ಯಕ್ಷರಿಗೆ ಮನವಿ ನೀಡಿದ ಒಂದೇ ಕಾರಣಕ್ಕೆ ಸ್ವಾಮಿಜಿಯನ್ನು ಕೈಬಿಡಲಾಗಿದ್ದು ಸಾಹಿತ್ಯ ಸಮ್ಮೇಳನ ಸಮಿತಿಯು ರಾಜಕೀಯ ಒತ್ತಡಕ್ಕೆ ಮಣಿದಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಕಡಬ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜನಾರ್ಧನ ಗೌಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು ಸಾಹಿತ್ಯ ಸಮ್ಮೇಳನದ ಸಮಿತಿಗೆ ಬಿಟ್ಟ ವಿಚಾರವೆಂದು ಗೊಂದಲದ ವಿಚಾರದಿಂದ ಹಿಂದೆ ಸರಿದಿದ್ದಾರೆ.

970×90