ಕಡಬ:ಗ್ರಾ.ಪಂ ಮಾಜಿ ಅಧ್ಯಕ್ಷರ ಫೇಸ್ಬುಕ್ ಖಾತೆ ಹ್ಯಾಕ್| ಹಣ ವರ್ಗಾಯಿಸುವಂತೆ ಆಪ್ತ ಸ್ನೇಹಿತರಿಗೆ ಕಿಡಿಗೇಡಿಗಳಿಂದ ಸಂದೇಶ ರವಾನೆ

ಕಡಬ:ಗ್ರಾ.ಪಂ ಮಾಜಿ ಅಧ್ಯಕ್ಷರ ಫೇಸ್ಬುಕ್ ಖಾತೆ ಹ್ಯಾಕ್| ಹಣ ವರ್ಗಾಯಿಸುವಂತೆ  ಆಪ್ತ ಸ್ನೇಹಿತರಿಗೆ  ಕಿಡಿಗೇಡಿಗಳಿಂದ  ಸಂದೇಶ ರವಾನೆ

ಕಡಬ ಟೈಮ್ಸ್ (KADABA TIMES):ಕಡಬ ಪಟ್ಟಣ: ಇತ್ತೀಚೆಗೆ ಫೇಸ್ಬುಕ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಡುವುದು ಸಾಮಾನ್ಯ ಎಂಬಂತೆ ಆಗಿದೆ.ಇದೀಗ ಕಡಬದ ಗ್ರಾ.ಪಂ ಮಾಜಿ ಅಧ್ಯಕ್ಷರ ಫೇಸ್ಬುಕ್ ಹ್ಯಾಕ್ ಮಾಡಲಾಗಿದ್ದು ಕಿಡಿಗೇಡಿಗಳು ಹಲವರಿಗೆ ಹಣ ನೀಡುವಂತೆ ಸಂದೇಶ ರವಾನಿಸಿದ್ದಾರೆ.

ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎಂ  ಹನೀಫ್ ಅವರ ಫೇಸ್ಬುಕ್ ಖಾತೆಯನ್ನು ಫೆ.೧೨ ರಂದು ಹ್ಯಾಕ್ ಮಾಡಲಾಗಿದೆ .ಹಣ ವರ್ಗಾಯಿಸುವಂತೆ ಸಂದೇಶ ರವಾನೆಯಾದ ಬೆನ್ನಲ್ಲೇ    ಅವರ ಆಪ್ತರು  ನೇರವಾಗಿ ಪೋನ್ ಮೂಲಕ ಸಂಪರ್ಕಿಸಿದಾಗ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಮೋಸಜಾಲದ ಕುರಿತು  ಮನಗಂಡ ಹನೀಫ್  ತಮ್ಮ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಅಲ್ಲದೆ   ಕಡಬ ಪೋಲೀಸ್ ಠಾಣೆಯ ಗಮನಕ್ಕೂ ತಂದಿದ್ದಾರೆ.

ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿರುವ.ಎಂ  ಹನೀಫ್ ಅವರು  ಜನರು ಎಚ್ಚರಿಕೆಯಿಂದ ವ್ಯವಹಾರ ಮಾಡುವಂತೆ ತಿಳಿಸಿದಲ್ಲದೆ   ಇಂತಹ ಮೋಸಜಾಲದ  ಬಗ್ಗೆ ತಿಳಿದುಕೊಳ್ಳುವಂತೆ ಜನರಲ್ಲಿ ವಿನಂತಿಸಿದ್ದಾರೆ.

970×90