ಕುಟ್ರುಪಾಡಿ:ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ |ನರೇಗಾ ಮಾಹಿತಿ ಸ್ಟಾಲ್ ಉದ್ಘಾಟಿಸಿದ ಸಚಿವ ಎಸ್. ಅಂಗಾರ

ಕುಟ್ರುಪಾಡಿ:ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ |ನರೇಗಾ ಮಾಹಿತಿ ಸ್ಟಾಲ್ ಉದ್ಘಾಟಿಸಿದ ಸಚಿವ ಎಸ್. ಅಂಗಾರ

ಕಡಬ ಟೈಮ್ಸ್ (KADABA TIMES):ಕುಟ್ರುಪಾಡಿ: ಕಡಬ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ ವ್ಯಾಪ್ತಿಯ ಕೇಪು ಎಂಬಲ್ಲಿ ಫೆ. 12 ರಂದು ಕರ್ನಾಟಕ ಸರಕಾರ, ಜಿಲ್ಲಾಡಳಿತ ದ.ಕ. ಜಿಲ್ಲೆ ಮಂಗಳೂರು  ಇದರ ವತಿಯಿಂದ ಜಿಲ್ಲಾಧಿಕಾರಿಯವರ ಮೊದಲ “ಗ್ರಾಮ ವಾಸ್ತವ್ಯ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಡಬ ತಾ.ಪಂ ಕಡಬ ಮತ್ತು ಕುಟ್ರುಪಾಡಿ ಗ್ರಾ.ಪಂ  ವತಿಯಿಂದ ತೆರೆಯಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಸ್ಟಾಲ್ ಅನ್ನು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ಅವರು ಉದ್ಘಾಟಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಾಜೇಂದ್ರ ,, ಅಪರ ಜಿಲ್ಲಾಧಿಕಾರಿ ರೂಪಾ, ಸಹಾಯ ಆಯುಕ್ತ ಯತೀಶ್ ಉಲ್ಲಾಳ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ಅನಂತಶಂಕರ್ , ಕಡಬ ತಾ.ಪಂ. ಸಹಾಯಕ ನಿರ್ದೇಶಕ  ಚೆನ್ನಪ್ಪ ಗೌಡ,  ತಾ.ಪಂ. ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ  ಜಯಂತಿ ಗೌಡ, ಜಿ.ಪಂ ಸದಸ್ಯ ವರ್ಗೀಸ್, ತಾ.ಪಂ. ಸದಸ್ಯರಾದ ಶುಭದಾ ಎಸ್ ರೈ, ಗಣೇಶ್ ಕೈಕುರೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.  ನರೇಗಾ ಸ್ಟಾಲ್ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಯಿತು.

970×90