ಕಡಬ ಟೈಮ್, ಬಿಜೆಪಿ
ಮತ್ತು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅರುಣ್
ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಎಫ್.ಐ.ಆರ್. ಮತ್ತು
ನ್ಯಾಯಾಲಯದ ಮುಂದಿನ ತನಿಖಾ ಪ್ರಕ್ರಿಯೆಗೆ ಸೆ.10ರಂದು ಮಾನ್ಯ ಹೈಕೋರ್ಟ್(High Court of
Karnataka) ತಡೆಯಾಜ್ಞೆ
ನೀಡಿದೆ.
ಪುತ್ತಿಲ
ಅವರು ಬೆಂಗಳೂರಿನ ಹೊಟೇಲೊಂದರಲ್ಲಿ
ತನ್ನನ್ನು ಅತ್ಯಾಚಾರ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನೀಡಿದ್ದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಅರುಣ್ ಪುತ್ತಿಲ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪುತ್ತಿಲ
ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ. ಪಿ. ಹೆಗ್ಡೆ ಅವರು ಮಹಿಳೆಯ ದೂರು ರಾಜಕೀಯ ಷಡ್ಯಂತ್ರದಿಂದ ಕೂಡಿದೆ. ಸುಳ್ಳು ಆರೋಪ ಹೊರಿಸಲಾಗಿದೆ. 47 ವರ್ಷದ ಮಹಿಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ, ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಒಂದು ವರ್ಷದ ಹಿಂದೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ.
ಈ ದೂರು ಸುಳ್ಳಿನಿಂದ
ಕೂಡಿದೆ. ಅರುಣ್ ಪುತ್ತಿಲ ಅವರೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆದ
ಬಳಿಕ ಹಾಗೂ ಈ ವಿಚಾರಕ್ಕೆ ಸಂಬಂಧಿಸಿ
ನ್ಯಾಯಾಲಯ ತಡೆಯಾಜ್ಞೆ ನೀಡಿದ ನಂತರ ಅತ್ಯಾಚಾರದ ಆರೋಪವನ್ನು ಮಾಡಲಾಗಿದೆ. ಇದು ಸುಳ್ಳು ಆರೋಪವಾಗಿದ್ದು ಈ ಬಗ್ಗೆ ದಾಖಲಾಗಿರುವ
ಎಫ್.ಐ.ಆರ್. ಮತ್ತು
ನ್ಯಾಯಾಲಯದ ಮುಂದಿನ ತನಿಖೆಗೆ ತಡೆ ನೀಡಬೇಕು ಎಂದು ಪಿ.ಪಿ.ಹೆಗ್ಡೆ
ನ್ಯಾಯಪೀಠದ ಗಮನ ಸೆಳೆದಿದ್ದರು.
ಇವರ
ವಾದ ಪುರಸ್ಕರಿಸಿದ ನ್ಯಾಯಮೂರ್ತಿಗಳು ಎಫ್.ಐ.ಆರ್. ಮತ್ತು
ಮುಂದಿನ ತನಿಖೆಗೆ ತಡೆಯಾಜ್ಞೆ
ನೀಡಿ ಆದೇಶಿಸಿದ್ದಾರೆ.
Short News In English: An FIR has been registered against Arun Kumar Puttila, who is active in the BJP and the Hindu organization, on charges of rape. And the Hon’ble High Court (High Court of Karnataka) issued a restraining order for the further investigation process of the court on September 10. The police had registered a case based on a complaint lodged by a woman who alleged that Putthila had raped her and threatened her life in a hotel in Bangalore. Arun Puttila had approached the High Court questioning this.