ಕಡಬ:
ಶಾಸಕಿಯವರು ಬರೇ ಪೇಪರ್ ಸ್ಟೇಂಟ್ ಮೆಂಟ್ ಕೊಟ್ಟರೆ ಊರು ಸರಿಯಾಗಲ್ಲ
, ಶಾಸಕರನ್ನು ದೂರುವುದಲ್ಲ, ಮೂವತ್ತು ವರ್ಷದಿಂದ ಬಿಜೆಪಿ ಶಾಸಕರು ಇಲ್ಲಿದ್ದಾರೆ, ಒಂದೊಂದು ವರ್ಷದಲ್ಲಿ ಒಂದೊಂದು ಬಿಲ್ಡಿಂಗ್
ಗೆ ಹಣ ಬಿಡುಗಡೆ ಮಾಡುತ್ತಿದ್ದರೆ ಹತ್ತು ಬಿಲ್ಡಿಂಗ್ ಆಗುತ್ತಿತ್ತು, ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್
ಮುಖಂಡ ರಾಯ್ ಅಬ್ರಹಾಂ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಮಾತನಾಡುತ್ತಿರುವುದು |
ಮಂಗಳವಾರ
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿ ಮಾತನಾಡಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಶಾಲಾ ಕಟ್ಟಡ ಕುಸಿತವಾದ ಹಿನ್ನೆಲೆಯಲ್ಲಿ ಉಳಿದ ಕೊಠಡಿಗಳು ಕೂಡಾ ಬಳಕೆಗ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನು ತೆರವುಗೊಳಿಸಿ ನೂತನ ಐದು ಕೊಠಡಿಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಂಗ್ರೆಸ್
ಮುಖಂಡ ಜಿ.ಕೃಷ್ಣಪ್ಪ, ವಿಧಾನಪರಿಷತ್
ಸದಸ್ಯ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿಯವ ಮುಖಾಂತರ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ನಮ್ಮ ನಾಯಕರ ಒತ್ತಾಯದ ಮೇರೆಗೆ ಸರಕಾರ 85ರಿಂದ 90
ಲಕ್ಷ ರೂ ಅನುದಾನ ಮಂಜೂರುಗೊಂಡಿದೆ ಎಂದು ಹೇಳಿದರು.
ಕುಂತೂರು
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಸರಕಾರ 80 ಲಕ್ಷ ರೂ ಮಂಜೂರುಗೊಳಿಸಿದೆ
ಎಂದು ಹೇಳಿದರು. ಸುಳ್ಯ ಶಾಸಕಿಯವರು
ಸರ್ಕಾರದಲ್ಲಿ ಹಣವಿಲ್ಲವೆಂದು ಹೇಳಿದ್ದಾರೆ, ಅಗತ್ಯವಿದ್ದರೆ
ಹೀಗೆ ಹೇಗೆ ಹಣ ಬಂತು. ಪುತ್ತೂರಲ್ಲಿದೆ ಬಂಟ್ವಾಳದಲ್ಲಿ ಕೆಲಸವಾಗುತ್ತಿದೆ, ಶಾಸಕಿಯವರು ಮುತುವರ್ಜಿ ವಹಿಸಬೇಕು ಎಂದರು.
ಶಾಸಕಿಯವರು ಮೊನ್ನೆ ಬಂದು ಯಾರ
ವಿರುದ್ದವೂ ಕೇಸು ನೀಡುವುದು ಬೇಡ, ನಾನು ಅನುದಾನ
ಬಿಡುಗಡೆ ಮಾಡ್ತನೆ ಎಂದಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲವೆಂದು ಶಾಸಕಿಯವರು ಹೇಳಿರುವುದು ಸರಿಯಲ್ಲ ಎಂದರು.
ಕುಂತೂರು
ಶಾಲಾ ಕಟ್ಟಡದ ಹಿಂಭಾಗದಲ್ಲಿ
ತಡೆಗೋಡೆಯ
ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ, ಅಧಿಕೃತವಾದ
ಯಾವುದೇ ಎಗ್ರಿಮೆಂಟು ಮಾಡದೇ ಎಂಜಿನಿಯರ್,
ಗುತ್ತಿಗೆದಾರ ಮತ್ತು ಪಂಚಾಯತಿಯವರು ಸೇರಿಕೊಂಡು ಹಣ ಹೊಡೆಯುವ
ಉದ್ದೇಶದಿಂದ ಕಳಪೆ ಕಾಮಗಾರಿ ಮಾಡಿ ಅವ್ಯವಹಾರ ನಡೆಸಲಾಗಿದೆ. ಆದ್ದರಿಂದ
ಇವರ ವಿರುದ್ಧ ಕಾನೂನುಕ್ರಮ ಜರಗಿಸಬೇಕು, ಅವರಿಂದಲೇ ನಷ್ಟವನ್ನುಭರಿಸಬೇಕು, ವಾರ್ಡ್
ಸದಸ್ಯರು ಹಾಗೂ ಆಡಳಿತ ಮಂಡಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಟ್ಟಡ ಕುಸಿತದ ನೈತಿಕ ಹೊಣೆಗಾರಿಕೆ ಇರುವುದರಿಂದ ಅವರೆಲ್ಲಾ ತಮ್ಮ ಸ್ಥಾನಕ್ಕೆ
ರಾಜಿನಾಮೆ ನೀಡಬೇಕು , ಈ ಬಗ್ಗೆ ಜಿಲ್ಲಾಧಿಕಾರಿಯವರು, ಸಹಾಯಕ ಆಯುಕ್ತರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕಡಬ ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ಶಾಲಾ ಹಿರಿಯ ವಿದ್ಯಾರ್ಥಿ ಗುರುರಾಜ್ ಕೇವಲ, ಸಾಮಾಜಿಕ ಮುಂದಾಳು ಸಾಜಾನ್ ವರ್ಗೀಸ್ ಉಪಸ್ಥಿತರಿದ್ದರು.