Home ಪ್ರಮುಖ ಸುದ್ದಿ ಸುಬ್ರಹ್ಮಣ್ಯ ಠಾಣೆಗೆ ಪಶ್ಚಿಮ ವಲಯ ಡಿಜಿಪಿ ಅಮಿತ್ ಸಿಂಗ್ ಭೇಟಿ: ಕಡಬ ಭಾಗಕ್ಕೆ ಸಂಚಾರಿ...

ಸುಬ್ರಹ್ಮಣ್ಯ ಠಾಣೆಗೆ ಪಶ್ಚಿಮ ವಲಯ ಡಿಜಿಪಿ ಅಮಿತ್ ಸಿಂಗ್ ಭೇಟಿ: ಕಡಬ ಭಾಗಕ್ಕೆ ಸಂಚಾರಿ ಪೊಲೀಸ್ ಠಾಣೆ ಆಗುತ್ತಾ?

1
0

ಕುಕ್ಕೆ
ಸುಬ್ರಹ್ಮಣ್ಯ :
ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಅವರು   ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ  ಗುರುವಾರ
ಭೇಟಿ
ನೀಡಿದ್ದಾರೆ.

UNIC-KADABA


ಮೊದಲಬಾರಿಗೆ
 ಸುಬ್ರಹ್ಮಣ್ಯ
ಪೊಲೀಸ್ ಠಾಣೆಗೆ ಆಗಮಿಸಿದ ಇವರು  ಇಲಾಖೆ
ಕಾರ್ಯ ವೈಖರಿ,  ಕಡತಗಳ
ಪರಿಶೀಲನೆ, ಇನ್ನಿತರ ಪೊಲೀಸ್ ಇಲಾಖೆಗೆ ಸಂಬಂಧಿಸಿದ  ವಿಚಾರದಲ್ಲಿ
ಸಿಬ್ಬಂದಿಗಳ ಜೊತೆ ಚರ್ಚಿಸಿದರು.
ಸುಬ್ರಹ್ಮಣ್ಯದಲ್ಲಿ
ನೂತನವಾಗಿ ನಿರ್ಮಾಣವಾಗಿರುವ
ಪೊಲೀಸ್ ಠಾಣೆಯ ಕಟ್ಟಡವನ್ನು  ವೀಕ್ಷಣೆ
ಮಾಡಿ  ಶೀಘ್ರದಲ್ಲಿ
ಉದ್ಘಾಟನೆಗೊಳಿಸುವ ಪ್ರಕ್ರಿಯೆ ಬಗ್ಗೆ
ಮಾಧ್ಯಮಕ್ಕೆ ಮಾಹಿತಿ ನೀಡಿದರು.

GURUJI ADD



ಪ್ರೆಸ್
ಕ್ಲಬ್ ವತಿಯಿಂದ
ಗೌರವ: ಮೊದಲ ಬಾರಿಗೆ ಕುಕ್ಕೆಗೆ ಆಗಮಿಸಿದ
ಪೋಲಿಸ್
ಮಹಾ ನಿರೀಕ್ಷಕರನ್ನು ಪ್ರೆಸ್ ಕ್ಲಬ್ ವತಿಯಿಂದ
ಗೌರವಿಸಲಾಗಿತು. ಈ ವೇಳೆ
 ಕುಕ್ಕೆಗೆ ಕಡಬದಿಂದ ಅಥವಾ ಸುಳ್ಯದಿಂದ 112 ತುರ್ತು ವಾಹನ ಬರುತ್ತಿದ್ದು ಸಮಸ್ಯೆ ಆಗುತ್ತಿದೆ  ,ಹೀಗಾಗಿ
ಸುಬ್ರಹ್ಮಣ್ಯಕ್ಕೆ
112 ವಾಹನ
ನೀಡಬೇಕೆಂಬ ವಿಚಾರ ಗಮನಕ್ಕೆ ತಂದರು.  ಅಲ್ಲದೆ ಸುಬ್ರಹ್ಮಣ್ಯ ಠಾಣೆಗೆ , ದೇಗುಲಕ್ಕೆ ಖಾಯಂ ಪೊಲೀಸ್  ಸಿಬ್ಬಂದಿಗಳ
ನಿಯೋಜನೆ
 ಸುಳ್ಯ, ಕಡಬ
ಭಾಗಕ್ಕೆ ಸಂಚಾರಿ ಪೊಲೀಸ್ ಠಾಣೆ  ಆಗಬೇಕು
ಎಂದು ಮನವಿ ಮಾಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಸೂಕ್ತವಾಗಿ
ಸ್ಪಂದಿಸುವ ಭರವಸೆ ನೀಡಿದರು.



ಸಂಧರ್ಭದಲ್ಲಿದ.ಕ ಪೋಲಿಸ್ ಅಧಿಕ್ಷ  ಯತೀಶ್,
ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಾಜೇಂದ್ರ ಕುಮಾರ್, ಪೋಲಿಸ್ ಉಪ ಅಧಿಕ್ಷಕ ಅರುಣ್
ನಾಗೇಗೌಡ, ಸುಬ್ರಮಣ್ಯ ಪೊಲೀಸ್ ಉಪನಿರಿಕ್ಷಕ  ಕಾರ್ತಿಕ್.ಕೆ ಪೊಲೀಸ್ ಸಿಬ್ಬಂಧಿಗಳು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here