ಸುಳ್ಯ: ಯುವಕನೊಬ್ಬ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ, ರಸ್ತೆ ಬದಿಯ ಸೂಚನಾ ಫಲಕಕ್ಕೆ ಗುದ್ದಿ, ಕಾರು ನಿಲ್ಲಿಸದೇ ಮುಂದಕ್ಕೆ ಹೋಗಿದ್ದು ಊರವರು ತಡೆದು ನಿಲ್ಲಿಸಿದ ಪ್ರಸಂಗ
ಸುಳ್ಯದಿಂದ ವರದಿಯಾಗಿದೆ.
ಸೆ.16ರಂದು ಸಂಜೆ ಅಜ್ಜಾವರ ದಲ್ಲಿ ಘಟನೆ ನಡೆದಿದ್ದು, ಕೇರಳದ ಕಾರೊಂದು ಅಜ್ಜಾವರ ರಸ್ತೆಯಾಗಿ ಅಡ್ಡಾದಿಡ್ಡಿ ಹೋಗುತ್ತಿತ್ತೆಂದು, ಕಾರು ಮೇನಾಲ ತಲುಪಿ ಮುಂದಕ್ಕೆ ಹೋಗಿ ರಸ್ತೆ ಬದಿ ಪಂಚಾಯತ್ ನವರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಗುದ್ದಿತೆಂದು ತಿಳಿದುಬಂದಿದೆ.
ಅದೇ ರಸ್ತೆಯ ಮುಂದಕ್ಕೆ ರಸ್ತೆ ಬದಿ ಮಕ್ಕಳು ನಡೆದುಕೊಂಡು ಹೋಗುತಿದ್ದರೆಂದು ಈ ಕಾರು ಅವರಿಗೆ
ತಾಗುವಂತೆ ಹೋಯಿತೆಂದು ತಿಳಿದುಬಂದಿದೆ. ಇದನ್ನು ನೋಡಿದ ಸ್ಥಳೀಯರು ಮಂಡೆಕೋಲಿನ ಪರಿಚಿತರಿಗೆ ಫೋನ್ ಮಾಡಿ ತಿಳಿಸಿದ್ದರು.
ಹೀಗಾಗಿ ಕಾರನ್ನು ಮಂಡೆಕೋಲಿನಲ್ಲಿ ತಡೆದು ನಿಲ್ಲಿಸಿ, ವಿಚಾರಿಸಿ ಬಿಟ್ಟರೆಂದು ತಿಳಿದುಬಂದಿದೆ. ಕಾರಿನ ಚಾಲಕ ಅಮಲು ಸೇವಿಸಿರುವುದಾಗಿ ಹೇಳಲಾಗಿದೆ. ಪೋಲೀಸರಿಗೆ
ಈ ಕುರಿತು ಮಾಹಿತಿ ನೀಡಲಾಗಿದ್ದು, ಕಾರಿನ ನಂಬರ್ ಪತ್ತೆ ಹಚ್ಚಿ ಮಾಲಕರಿಗೆ ನೋಟಿಸ್ ನೀಡುವ
ಪ್ರಕ್ರಿಯೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.