ಬೆಳ್ತಂಗಡಿಯ ಕಾಶಿಪಟ್ಣ ಗ್ರಾಮದ ಉರ್ದು ಗುಡ್ಡೆಯ ದಂಪತಿಗಳು ಮನೆಯ ಸಮೀಪದ ಕಾಡಿನಲ್ಲಿ ಗುರುವಾರ(ಸೆಪ್ಟೆಂಬರ್ 19) ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನ ನೊಣಯ್ಯ ಪೂಜಾರಿ(63 ವರ್ಷ) ಮತ್ತು ಅವರ ಪತ್ನಿ ಬೇಬಿ (46 ವರ್ಷ) ಆತ್ಮಹತ್ಯೆ ಮಾಡಿಕೊಂಡವರು.
ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು.ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು ಎಂಬ ಮಾಹಿತಿ ಲಭಿಸಿದೆ.
ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ಮದುವೆ, ಹಿಂದಿನ ಪತ್ನಿ ಕಳೆದ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದರು. ಬಳಿಕ ಬೇಬಿ ಅವರನ್ನು ವಿವಾಹವಾಗಿದ್ದರು.
ಮೊದಲನೆ ಪತ್ನಿಗೆ ಐದು ಗಂಡು, ಒಂದು ಹೆಣ್ಣು ಮಕ್ಕಳಿದ್ದರು.ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ