Home ಪ್ರಮುಖ ಸುದ್ದಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕೊಡೆ ಬಿಡಿಸಿದ ವೇಳೆ ರಸ್ತೆಗೆ ಎಸೆಯಲ್ಪಟ್ಟಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಿಸದೆ ಸಾವು

ಬೈಕ್ ನಲ್ಲಿ ಹೋಗುತ್ತಿದ್ದಾಗ ಕೊಡೆ ಬಿಡಿಸಿದ ವೇಳೆ ರಸ್ತೆಗೆ ಎಸೆಯಲ್ಪಟ್ಟಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಿಸದೆ ಸಾವು

 ಕಡಬ
ಟೈಮ್ಸ್ :
ಕೆಲ ದಿನಗಳ ಹಿಂದೆ ಬೈಕಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ
ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

UNIC-KADABA

ಮೃತ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿ


ಕಳೆದ
ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ನಿಕಟ ಸಂಬಂಧಿಕರೊಬ್ಬರ ಬೈಕಲ್ಲಿ
ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದ ಸಂದರ್ಭದಲ್ಲಿ, ಗಾಳಿಗೆ ಕೊಡೆ ಎಳೆಯಲ್ಪಟ್ಟು
ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ
ದಾಖಲಿಸಲಾಗಿತ್ತು.

ಈ ಸುದ್ದಿ ಓದಿರಿ: ಕುಕ್ಕೆ ಸುಬ್ರಹ್ಮಣ್ಯ:ಸ್ನಾನ ಘಟ್ಟದ ಬಳಿ ಭಕ್ತಾಧಿಗಳಿಗೆ ಶವರ್ ಬಾತ್ ವ್ಯವಸ್ಥೆ ಕಲ್ಪಿಸಿದ ಕುಕ್ಕೆ ದೇಗುಲ

GURUJI ADD


ಬಳಿಕ ಆಪರೇಶನ್ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ(ಸೆ.11) ನಿಧನರಾದರು ಎಂದು ತಿಳಿದುಬಂದಿದೆ.
ಸುಳ್ಯದ ಬೀರಮಂಗಲ ನಿವಾಸಿ, ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ.ಅಚ್ಚುತ
ಪೂಜಾರಿಯವರ ಪತ್ನಿಯಾಗಿದ್ದಾರೆ.


LEAVE A REPLY

Please enter your comment!
Please enter your name here