ಪಂಜ: ಇಲ್ಲಿನ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಕಡವೆ ಜಿಗಿದು ಬೈಕ್ ಸವಾರ ಗಾಯ ಗೊಂಡ ಘಟನೆ ಸೆ.29 ರಾತ್ರಿ ವರದಿಯಾಗಿದೆ.
ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಎಂಬವರು ಗಾಯ ಗೊಂಡ ಸವಾರ.
ತನ್ನ ಮನೆಯಿಂದ ಪಂಜ ಕಡೆ ಹೋಗುತ್ತಿದ್ದಾಗ ಜಳಕದಹೊಳೆ ಎಂಬಲ್ಲಿ ಘಟನೆ ನಡೆದಿದೆ.ಬೈಕ್ ಸವಾರನ ಕೈ,ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಢಬದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.