ನೆಲ್ಯಾಡಿ: ನೆಲ್ಯಾಡಿ–ಮಾದೇರಿ ರಸ್ತೆಯ ನೆಲ್ಯಾಡಿ ರಿಯಾ ರಬ್ಬರ್ ಟ್ರೇಡರ್ಸ್ ಸಮೀಪ ರಾಸಾಯನಿಕ ಗೊಬ್ಬರ ಸಾಗಾಟದ ಲಾರಿಯೊಂದು ಚರಂಡಿಗೆ ಬಿದ್ದ ಪರಿಣಾಮ ವಿದ್ಯುತ್ ಕಂಬವೊಂದಕ್ಕೆ ಹಾನಿಯಾದ ಘಟನೆ ಸೆ.3ರಂದು ಸಂಜೆ ನಡೆದಿದೆ.
ನೆಲ್ಯಾಡಿಯಿಂದ ಆಲಂಕಾರಿಗೆ ರಾಸಾಯನಿಕ ಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ನೆಲ್ಯಾಡಿ–ಮಾದೇರಿ ಮೂಲಕ ಆಲಂಕಾರಿಗೆ ಸಂಚರಿಸುತ್ತಿದ್ದು
ಆದರೆ ಮಾದೇರಿ ಸಮೀಪ ಏರುಜಾಗದಲ್ಲಿ ಸಂಚಾರ ಸಾಧ್ಯವಾಗದೇ ಇದ್ದ ಹಿನ್ನೆಲೆಯಲ್ಲಿ ಚಾಲಕ ಲಾರಿ ತಿರುಗಿಸಿ ಅದೇ ರಸ್ತೆಯಲ್ಲಿ ಮತ್ತೆ ನೆಲ್ಯಾಡಿ ಕಡೆಗೆ ಬರುತ್ತಿದ್ದ ವೇಳೆ ಏರುರಸ್ತೆಯಲ್ಲಿ ಹತ್ತಲಾಗದೇ ಲಾರಿ ಹಿಂದಕ್ಕೆ ಚಲಿಸಿ ಪಕ್ಕದ ಚರಂಡಿಗೆ ಬಿದ್ದಿದೆ.
ಈ ವೇಳೆ ಲಾರಿಯ ಹಿಂಭಾಗ ಅಲ್ಲೇ ಇದ್ದ ವಿದ್ಯುತ್ ಕಂಬವೊಂದಕ್ಕೂ ತಾಗಿದ ಪರಿಣಾಮ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ