Home ಪ್ರಮುಖ ಸುದ್ದಿ ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಪಾನಪತ್ತ ವ್ಯಕ್ತಿಗಳು: ಪೊಲೀಸರು ಬಂದ ಬಳಿಕ ಆಗಿದ್ದೇನು?

ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಪಾನಪತ್ತ ವ್ಯಕ್ತಿಗಳು: ಪೊಲೀಸರು ಬಂದ ಬಳಿಕ ಆಗಿದ್ದೇನು?

ಕಡಬ ಟೈಮ್, ಸುಳ್ಯ:  ಸುಳ್ಯದ ಪೇಟೆಯಲ್ಲಿ ಪಾನಪತ್ತ ವ್ಯಕ್ತಿಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಆಗಾಗ ದೂರುಗಳು ವ್ಯಕ್ತವಾಗುತ್ತಿತ್ತು.   ಕತ್ತಲಾಗುತ್ತಿದ್ದಂತೆ ಸುಳ್ಯದ ಗಾಂಧಿನಗರ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ  ಪಾನಮತ್ತ ವ್ಯಕ್ತಿಗಳು ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. 

UNIC-KADABA
ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಜಗಳ ಮಾಡುತ್ತಿರುವುದು

ಅದರಲ್ಲೂ  ವಲಸೆ ಕಾರ್ಮಿಕರು ಸುಳ್ಯದ ಮೇಲಿನ ಪೇಟೆಯ ಭಾಗದಲ್ಲಿ ಕುಡಿದು ತೂರಾಟ ನಡೆಸಿ ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಕಳೆದ  ಎರಡು ದಿನಗಳ ಹಿಂದೆ ವಲಸೆ ಕಾರ್ಮಿಕರಿಬ್ಬರು ಸುಳ್ಯದ ಗಾಂಧಿನಗರ ಬಳಿ ಪಾನಮತ್ತ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. 

GURUJI ADD

ಪೊಲೀಸರು ಬರುತ್ತಿದ್ದಂತೆ ಓರ್ವ  ರಸ್ತೆ ಪಕ್ಕ ನಿಂತಿದ್ದ  ಲಾರಿಯ ಚಕ್ರದಡಿ ನುಗ್ಗಿ ಅವಿತುಕೊಂಡು ಪೊಲೀಸರನ್ನೇ ಸತಾಯಿಸಿರುವುದು ತಿಳಿದು ಬಂದಿದೆ.ಆ ಬಳಿಕ ಆತನನ್ನು ಪೊಲೀಸರು ಲಾರಿಯಡಿಯಿಂದ  ಹೊರಗೆ ಕರೆತಂದು ಬುದ್ದಿವಾದ ಜೊತೆಗೆ ಎಚ್ಚರಿಕೆಯನ್ನೂ ನೀಡಿರುವುದಾಗಿ ತಿಳಿದು ಬಂದಿದೆ.  

 ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ   ಅನಾವಶ್ಯಕವಾಗಿ  ಗಲಾಟೆ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸರು ನಿಗಾವಹಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

LEAVE A REPLY

Please enter your comment!
Please enter your name here