ಕಡಬ/ಧರ್ಮಸ್ಥಳ:
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ
ಮಂಡಿಸಿ ಈಗ
ಸಂಯುಕ್ತ ಸಂಸದೀಯ ಮಂಡಳಿಗೆ ಪರಿಶೀಲನೆಗಾಗಿ ಒಪ್ಪಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆ ಬೇಕೆಂದು ಇಂಡಿಯನ್ ಯೂನಿಯನ್
ಮುಸ್ಲಿಂ ಲೀಗ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ಡಾ. ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ಭೇಟಿಯಾದ ನಿಯೋಗ |
ರಾಜ್ಯ
ಮುಸ್ಲಿಂ ಲೀಗ್ ನಿರ್ವಾಹಕ ಸಮಿತಿ ಸದಸ್ಯ ಎಎಸ್ಇ ಕರಿಂ ಕಡಬ ರವರ ನೇತೃತ್ವದಲ್ಲಿ ನಿಯೋಗವು ಜೆಪಿಸಿ
ಸದಸ್ಯ, ಸಂಸದರೂ
ಆಗಿರುವ ಡಾ. ವೀರೇಂದ್ರ ಹೆಗ್ಗಡೆಯವರನ್ನು
ಧರ್ಮಸ್ಥಳದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ವಕ್ಫ್ ಮುಸ್ಲಿಮರ
ಧಾರ್ಮಿಕ ಅನುಷ್ಠಾನದ ಭಾಗವಾಗಿದ್ದು ಈಗ ಮಂಡಿಸಲಾದ ಮಸೂದೆಯು
ವಕ್ಫ್ ಎಂಬ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಿರಾಕರಿಸುವಂತದಾಗಿದ್ದು ಇದು ದೇಶದ ಸಂವಿಧಾನವು ಕಲ್ಪಿಸಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ವ್ಯಕ್ತಿರಿಕ್ತವಾಗಿದ್ದು ಸಂವಿಧಾನ ವಿರೋಧಿಯೂ ಆಗಿರುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ನಿಯೋಗದಲ್ಲಿ
ರಾಜ್ಯ ಸಮಿತಿ ಸದಸ್ಯರಾದ ಸಿದ್ದೀಕ್ ಕಡಬ,ಸಿ. ಅಬ್ದುಲ್ ರಹಿಮಾನ್, ಸೈಯದ್ ಬಂಗೇರುಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಶಬೀರ್ ತಲಪಾಡಿ ಉಪಸ್ಥಿತಿ ಇದ್ದರು.