ಕಡಬ ಟೈಮ್, ನೆಲ್ಯಾಡಿ:
ಇಲ್ಲಿನ ಹೊರ ಠಾಣಾ ವ್ಯಾಪ್ತಿಯ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನ ವಿದ್ಯಾರ್ಥಿ
ನಾಪತ್ತೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಥಮ
ಬಿಎ ವಿದ್ಯಾರ್ಥಿಯಾಗಿರುವ ಹತ್ಯಡ್ಕ ಗ್ರಾಮದ
ನಿವಾಸಿ ಎಂ. ವಿಜಯಚಂದ್ರ ಅವರ ಪುತ್ರ ತೀರ್ಥೇಶ ಎಂ. (18) ನಾಪತ್ತೆಯಾದವರು.
ಶನಿವಾರ
ಮುಂಜಾನೆ ಮನೆಯಿಂದ ಕಾಲೇಜಿಗೆಂದು ಹೊರಟಾತ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟವಿದೆ ಎಂಬ ಕಾರಣ ನೀಡಿ ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದನೆಂದೂ, ಶನಿವಾರ ಸಂಜೆ ನೆಲ್ಯಾಡಿ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದುದ್ದನ್ನು ಸಹಪಾಠಿಗಳು ಕಂಡಿರುವುದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.