ಕಡಬ ಟೈಮ್: ಕಡಬ ಸರಸ್ವತಿ
ವಿದ್ಯಾಲಯ ವಿದ್ಯಾನಗರ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ತಮ್ಮಯ್ಯ
ಗೌಡ ಸುಳ್ಯ ಮತ್ತು ಶಿಕ್ಷಕಿ ಶ್ರೀಮತಿ
ದೇವಕಿ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ತಮ್ಮಯ್ಯ ಗೌಡ ವರು, ನಮ್ಮ ಜೀವನದ ಅಂತ್ಯವರೆಗಿನ ಪಯಣವನ್ನು ಸುಲಭಗೊಳಿಸಿಕೊಳ್ಳಲು ಗುರುವಿನ ಅನುಗ್ರಹ ಹೊಂದಿರಬೇಕಾಗಿರುವುದು ಅಗತ್ಯವಿದೆ. ಜೊತೆಗೆ ಅವರ ಜೀವನ ನಮಗೆಲ್ಲ ಮಾದರಿಯಾಗಿದ್ದು, ಅವರನ್ನು ನೆನಪಿಸಿಕೊಳ್ಳವುದು ಸೌಭಾಗ್ಯವಾಗಿದೆ ಎಂದರು .ವೇದಿಕೆಯಲ್ಲಿ ಸರಸ್ವತಿ
ಸಮೂಹ ಸಂಸ್ಥೆಗಳ ಸಂಚಾಲಕರಾದ ವೆಂಕಟರಮಣರಾವ್ ಮಂಕಡೆ ಮತ್ತು ಮುಖ್ಯ ಗುರು ಮಾಧವ ಕೋಲ್ಪೆ ಉಪಸ್ಥಿತರಿದ್ದರು.
ಶಿಕ್ಷಕಿಯರಾದ
ಶ್ರೀಮತಿ ಇಂದಿರಾ ಮತ್ತು ಶ್ರೀಮತಿ ವಿನುತಾ ಸನ್ಮಾನ ಪತ್ರ ವಾಚಿಸಿದರು .ಬಳಿಕ ಸಂಸ್ಥೆಯ ಮಾತೃ
ಭಾರತಿ ಮತ್ತು ವಿದ್ಯಾರ್ಥಿಗಳ ಸಹಯೋಗದಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಮುಖ್ಯ ಶಿಕ್ಷಕ ಮಾದವ ಕೋಲ್ಪೆ ಸ್ವಾಗತಿಸಿ ಶಿಕ್ಷಕ ವಸಂತ್ ಕರಂಬೋಡಿ ಧನ್ಯವಾದಗೈದರು . ಶಿಕ್ಷಕಿ ಶ್ರೀಮತಿ ಮೀನಾ ಕಾರ್ಯಕ್ರಮ ನಿರೂಪಿಸಿದರು.