ಕಾಣಿಯೂರು:
ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಪೊದರು, ಗಿಡಗಳನ್ನು
ತಮ್ಮ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಿ ಗ್ರಾಮದ
ಯುವಕರು ಇತತರಿಗೆ ಸ್ಪೂರ್ತಿಯಗಿದ್ದಾರೆ.
ಸಾಮಾನ್ಯವಾಗಿ
ಅನುದಾನ ಲಭ್ಯತೆ ಇದ್ದರಷ್ಟೇ ಕೆಲಸ ಮಾಡಲು ಮುಂದಾಗುತ್ತಾರೆ. ಆದರೆ ಊರಿನ
ರಸ್ತೆ
ಅಭಿವೃದ್ಧಿಯಲ್ಲಿ ಊರಿನ
ಜನರ ಸಹಭಾಗಿತ್ವವೂ ಮಹತ್ತರ ಪಾತ್ರವನ್ನು
ವಹಿಸುತ್ತದೆ ಎಂಬುದಕ್ಕೆ ಈ ಯುವಕರ ಕಾರ್ಯ ನಿದರ್ಶನದಂತಿದೆ.
ಬೆಳಂದೂರು
ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು,ಮಾದೋಡಿ, ಪೆರುವಾಜೆ, ಬೆಳ್ಳಾರೆ ಸಂಪರ್ಕ ರಸ್ತೆಯಲ್ಲಿ ಪೊದರು, ಗಿಡಗಳು ತುಂಬಿ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತಿತ್ತು.
ಹೀಗಾಗಿ
ಪೊದೆಗಳು, ಗಿಡಗಳ
ತೆರವು ಕಾರ್ಯಾಚರಣೆ ಮತ್ತು ಕೊಡಿಮಾರು, ಮಿಪಾಲು ಎಂಬಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ
ಪೊದರು, ಗಿಡಗಳ ತೆರವು ಮತ್ತು ರಸ್ತೆಯ ಬದಿಯಲ್ಲಿ ಇದ್ದ ಮರದ ತುಂಡುಗಳನ್ನು ಬದಿಗೆ ಸರಿಸಿ ವಾಹನಗಳು ಸರಾಗವಾಗಿ ಹೋಗಲು ಅನುಕೂಲವಾಗುವಂತೆ ಮಾಡಲಾಗಿದೆ.
ಬೆಳಂದೂರು
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ
ಅಬೀರ, ದಿನೇಶ್ ಕಾನಾವು, ತೇಜಸ್ ಕಾನಾವು, ಅಶೋಕ್ ಬಳ್ಪ ಕೈಜೋಡಿಸಿದ್ದಾರೆ.