Home ಪ್ರಮುಖ ಸುದ್ದಿ ಕಡಬ ಠಾಣೆಯಲ್ಲಿ ವಿವಿಧ ಧಾರ್ಮಿಕ ಮುಖಂಡರ ಸಭೆ: ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಸೂಚನೆ

ಕಡಬ ಠಾಣೆಯಲ್ಲಿ ವಿವಿಧ ಧಾರ್ಮಿಕ ಮುಖಂಡರ ಸಭೆ: ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಸೂಚನೆ

ಕಡಬ ಟೈಮ್ಸ್:  ಗಣೇಶೋತ್ಸವ, ಈದ್ ಮಿಲಾದ್ ಹಾಗೂ ಮೇರಿ ಮಾತೆಯ ಜನ್ಮದಿನ ಆಚರಣೆ ವೇಳೆ ಸಾರ್ವಜನಿಕವಾಗಿ ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಡಬ ಠಾಣೆಯಲ್ಲಿ  ವಿವಿಧ ಧಾರ್ಮಿಕ ಪ್ರಮುಖರ ಸಭೆಯು ಸೆ.6 ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಠಾಣಾ ಎಸ್ಐ ಅಭಿನಂದನ್ ಎಂ.ಎಸ್ ಅವರು ವಿಷಯ ಪ್ರಸ್ತಾಪಿಸಿ 
, ಹಬ್ಬಗಳು ಶಾಂತಿಯುತವಾಗಿ ನಡೆಯಬೇಕೆಂಬ ಇರಾದೆಯಿಂದ ಸರಕಾರವು ಹಲವು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಹಬ್ಬಗಳ ಮೆರವಣಿಗೆ ಸಮಯದಲ್ಲಿ ಪ್ರಮುಖ  ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ  ಸಂಘಟಕರು ಹೆಚ್ಚಿನ ಕಾಳಜಿ ವಹಿಸಿ  ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಗಣೇಶನ ವಿಗ್ರಹ ವಿಸರ್ಜನೆ ಸಹಿತ ಯಾವುದ ಮೆರವಣಿಗೆ ವೇಳೆ ಡಿಜೆಗೆ ( ಕರ್ಕಶ ದ್ವನಿ) ಅವಕಾಶವಿಲ್ಲ. ನಿಯಮ ಮೀರಿ ಡಿಜೆ ಬಳಸಿದಲ್ಲಿ ಧ್ವನಿವರ್ಧಕ ಸಲಕರಣೆಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾಲಕರ ಮತ್ತು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು. ಸಭೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಧಾರ್ಮಿಕ ಸಂಘಟನೆಗಳ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here