ಆಲಂಕಾರು
:ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಚಾಲಕನ
ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸೆ. 28ರಂದು
ಕೆಮ್ಮಾರ ಎಂಬಲ್ಲಿ ನಡೆದಿದೆ.
ಕಡಬ
ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಅಡ್ಡಲಾಗಿ ಬಿದ್ದ ಕಾರನ್ನು ಕೂಡಲೇ ಸ್ಥಳೀಯರು ಕೂಡಿಕೊಂಡು
ಎತ್ತಿ ನಿಲ್ಲಿಸಿದ್ದಾರೆ.
ಬಸ್
ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ
ಪ್ರಯಾಣಿಕರು ಇರಲಿಲ್ಲ. ಇದರಿಂದ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ
ಪಾರಾಗಿದ್ದಾರೆ.
ಸುಬ್ರಹ್ಮಣ್ಯಕ್ಕೆ
ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯು
ಹಳೆಗೇಟು– ಕೊಯಿಲದವರೆಗೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ– ಗುಂಡಿಗಳಿಂದ ಕೂಡಿದೆ. ಹಲವು ಬಾರಿ ಈ ಬಗ್ಗೆ ಮನವಿ
ಮಾಡಿದರೂ ಲೋಕೋಪಯೋಗಿ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕರದ್ದು