ಕಡಬ:
ಇತ್ತೀಚೆಗೆ ಎಡೆಬಿಡದೆ
ಸುರಿದ ಭಾರೀ ಮಳೆಯಿಂದಾಗಿ ಕಡಬ ತಾಲೂಕಿನ ಎಣ್ಮೂರು
ಶ್ರೀ ಕೋಟಿ ಚೆನ್ನಯ್ಯ ಗರಡಿಯ ಬಿರ್ಮೆರ್ ಮಾಡ, ಕಾಜುಕುಜುಂಬ ಮಾಡಕ್ಕೆ ಭಾರೀ ಹಾನಿಯಾಗಿದೆ.
ಕೋಟಿ
ಚೆನ್ನಯ್ಯ ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರು ಹೇಳುವಂತೆ, ಇಲ್ಲಿ ಪುರಾತನ
ಧ್ವಜಸ್ಥಂಭ ಶಿಲೆ ಕಂಬ ಇದೆ. ಅದು ಕೂಡ ಮುಳುಗಿದೆ.
ಒಂದು ಬದಿಯಿಂದ ಹೊಳೆ, ಇನ್ನೊಂದು ಬದಿಯಲ್ಲಿ ರಸ್ತೆ ಎರಡೂ ಕಡೆಯಿಂದಲೂ ನೀರು ಹರಿದು ಮಾಡ ನೆಲಕಚ್ಚಿದೆ.
ಐನೂರು
ವರ್ಷಗಳ ಇತಿಹಾಸ ಹೊಂದಿರುವ ಇದು ಮೊದಲ ಬಾರಿಗೆ ಮುಳುಗಡೆಯಾಗಿದೆ. ಕಾಜು ಕುಜುಂಬ ಮಾಡ ಪೂರ್ಣವಾಗಿ
ಧರಾಶಾಯಿಯಾಗಿದೆ.
ಹಿಂದಿನ
ಕಾಲದಲ್ಲಿ ಧ್ವಜಾರೋಹಣಗೈದು ಒಂದು ವಾರ ಜಾತ್ರೆ ನಡೆಯುತ್ತಿದ್ದು, ಇನ್ನು ಇದು ನೆನಪು ಮಾತ್ರ. ಸರಕಾರದ ಪ್ರವಾಸೋದ್ಯಮ ಇಲಾಖೆ ಇದರ ದುರಸ್ತಿಗೆ ಕೈ ಜೋಡಿಸಿದ್ದಲ್ಲಿ ಜೀರ್ಣೋದ್ಧಾರಗೊಳ್ಳಬಹುದು,
ಅತೀ ಶೀಘ್ರದಲ್ಲಿ ಕೆಲಸ ಕಾರ್ಯಗಳು ನೆರವೇರಬಹುದಾಗಿದೆ.