Home ಪ್ರಮುಖ ಸುದ್ದಿ ಏಕಾಏಕಿ ಮಹಿಳೆ ಸೇರಿದಂತೆ ಹಲವರಿಗೆ ತಿವಿದು ಗಾಯಗೊಳಿಸಿದ ಹಸು:ಅರವಳಿಕೆ ಮದ್ದು ನೀಡಿದ ಕೆಲ ಹೊತ್ತಲ್ಲೇ ...

ಏಕಾಏಕಿ ಮಹಿಳೆ ಸೇರಿದಂತೆ ಹಲವರಿಗೆ ತಿವಿದು ಗಾಯಗೊಳಿಸಿದ ಹಸು:ಅರವಳಿಕೆ ಮದ್ದು ನೀಡಿದ ಕೆಲ ಹೊತ್ತಲ್ಲೇ ಸಾವು

 ಕಡಬ ಟೈಮ್ಸ್: ಮನೆಯೊಂದರ
ಆವರಣದೊಳಗೆ ಹಸುವೊಂದು ನುಗ್ಗಿ ದಾಂಧಲೆ ನಡೆಸಿದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಸೇರಿದಂತೆ ಅನೇಕರಿಗೆ ತಿವಿದು ಗಾಯಗೊಳಿಸಿರುವ ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.

UNIC-KADABA


ಸ್ಥಳೀಯರು
ಹರಸಾಹಸ ಪಟ್ಟು ಹಸುವನ್ನು ಹಿಡಿದಿದ್ದು, ಪಶುವೈದ್ಯರು ಅರವಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಹಸು ಸತ್ತಿದ್ದು, ರೇಬೀಸ್ ನಿಂದ ಹಸು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.


GURUJI ADD

ಸೋಮೇಶ್ವರ
ದ್ವಾರದ ಬಳಿಯ ನಿವಾಸಿಯೋರ್ವರಿಗೆ ಸೇರಿದ ಹಸು ಮೇಯಲು
ಬಿಟ್ಟಿದ್ದ ವೇಳೆ ಸಂಜೆ ಏಕಾಏಕಿ ಹುಚ್ಚೆದ್ದು ಅವಾಂತರ ಸೃಷ್ಟಿಸಿದೆ. ಹಸು ಕೊಲ್ಯ
ಮೂಕಾಂಬಿಕ ದೇವಸ್ಥಾನದ ಬಳಿಗೆ ಸಾಗಿ ಸ್ಕೂಟರ್ ಒಂದಕ್ಕೆ ತಿವಿದಿದ್ದು, ಇತರರ ಮೇಲೂ ದಾಳಿ ನಡೆಸಿದೆ.


ಭಯಭೀತರಾದ
ಸ್ಥಳೀಯರು ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಿಗೆ ತಿಳಿಸಿದ್ದು ಅವರು   ಸ್ಥಳೀಯರ ಜತೆ ಸೇರಿ ಹಗ್ಗದಿಂದ ಧಾಂದಲೆ ನಡೆಸುತ್ತಿದ್ದ ಹಸುವನ್ನು ಹಿಡಿದಿದ್ದಾರೆ.  ಸ್ಥಳೀಯರು
ಹಿಡಿದ ಹಸುವಿಗೆ ಪಶು ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿದ್ದು ಕೆಲ ಹೊತ್ತಲ್ಲೇ ಹಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here